RNI NO. KARKAN/2006/27779|Wednesday, October 23, 2024
You are here: Home » breaking news » ಘಟಪ್ರಭಾ:ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಿ: ಶಾಸಕ ಬಾಲಚಂದ್ರ

ಘಟಪ್ರಭಾ:ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಿ: ಶಾಸಕ ಬಾಲಚಂದ್ರ 

ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಿ: ಶಾಸಕ ಬಾಲಚಂದ್ರ
ಘಟಪ್ರಭಾ ಫೆ 3 : ಜಾತ್ರೆಗಳು ನಮ್ಮ ನಾಡಿನ ಇತಿಹಾಸ, ಸಂಸ್ಕಂತಿ ಹಾಗೂ ವೈಭವವನ್ನು ನೆನಪಿಸುತ್ತವೆ. ಭಕ್ತಿ-ಭಾವ, ಪೂಜೆ-ಪುನಸ್ಕಾರ ಮೂಲಕ ದೇವರ ನಾಮಸ್ಮರಣೆ ಮಾಡುವ ಮೂಲಕ ಧಾರ್ಮಿಕತೆಗೆ ಎಲ್ಲರೂ ಒಳಗೊಂಡಿದ್ದೇವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಹುಣಶ್ಯಾಳ ಪಿಜಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಜಾತಿ-ಧರ್ಮಗಳ ಜನರು ಒಂದೇ ಮನೆಯ ಮಕ್ಕಳಂತೆ ಜಾತಿ-ಬೇಧ ಮರೆತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದು ಏಕತೆಯ ಸಂಕೇತವಾಗಿದೆ ಎಂದರು.
ಮುಂದಿನ ವರ್ಷ ನಿಜಗುಣ ದೇವರ ಬೆಳ್ಳಿ ಹಬ್ಬದ ಸಂಭ್ರಮ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಹಬ್ಬದ ಜಾತ್ರೆಯಾಗಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ನಿಮಿತ್ಯ ಹುಣಶ್ಯಾಳ ಪಿಜಿ ಗ್ರಾಮವು ಹಸಿರುಮಯವಾಗಲು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. 2500 ಸಸಿಗಳನ್ನು ನೆಟ್ಟು ಹಸಿರು ಪ್ರೀತಿಯನ್ನು ತೋರಿಸುವಂತೆ ಪರಿಸರ ಪ್ರೇಮಿಗಳಿಗೆ ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಣಶ್ಯಾಳ ಪಿಜಿ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು

ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಗುಣಗಾನ ಮಾಡಿದ ಅವರು, ಪಂಚಾಯತಿ ಸದಸ್ಯರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ತಿಂಗಳೊಳಗೆ ನಿರ್ಮಿಸಿಕೊಡುವುದಾಗಿ ಭರವಸೆಯಿತ್ತರು.
ತಮ್ಮ ಇಡೀ ಜೀವನವನ್ನೇ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕಾಗಿಯೇ ಮೀಸಲಿಟ್ಟಿರುವ ಸಾಲು ಮರದ ತಿಮ್ಮಕ್ಕ ಅವರು ನಮ್ಮ ಕ್ಷೇತ್ರಕ್ಕೆ ಬಂದು ಗಿಡಗಳನ್ನು ನೆಟ್ಟಿದ್ದಾರೆ. ಈ ಘಳಿಗೆ ಸ್ಮರಣೀಯವಾದದ್ದು. ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಬೇಕೆಂದು ಗ್ರಾಮಸ್ಥರನ್ನು ಕೋರಿದರು. ತಿಮ್ಮಕ್ಕ ಅವರ ಸಮಾಜ ಸೇವೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಂಡಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ನಿಜಗುಣ ದೇವರು ವಹಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಯಾವುದೇ ಫಲಾಪೇಕ್ಷೆಯಿಲ್ಲದೇ ಜನಸೇವೆ ಮಾಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಜನೋಪಯೋಗಿ ಕಾರ್ಯಗಳನ್ನು ಪ್ರಶಂಸಿಸಿದರು. ಶ್ರೀಮಠಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.
ಗ್ರಾಪಂ ಅಧ್ಯಕ್ಷೆ ಯಮನಪ್ಪ ನಾಯಿಕ, ತಾಪಂ ಸದಸ್ಯ ಬಸು ಹುಕ್ಕೇರಿ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಪುಂಡಲೀಕ ಸುಂಕದ, ಅವ್ವಣ್ಣಾ ಡಬ್ಬನ್ನವರ, ಜಗದೀಶ ಹುಕ್ಕೇರಿ, ಬಸು ಕಾಡಾಪೂರ, ಭೀಮಪ್ಪ ಮೇತ್ರಿ, ಮಹಾದೇವ ಕಡಿ, ರಾಮಪ್ಪ ಮ್ಯಾಗಡಿ, ಶಂಕರ ಇಂಚಲ, ಪ್ರಕಾಶ ತಳವಾರ, ಶಬ್ಬೀರ ತಾಂಬೀಟಗಾರ, ಸಂಜೀವ ಮ್ಯಾಗಡಿ, ಮಹಾದೇವ ದಂಡಿನವರ, ಮಲೀಕ ಹುಣಶ್ಯಾಳ, ಮುಂತಾದವರು ಉಪಸ್ಥಿತರಿದ್ದರು.

Related posts: