ಗೋಕಾಕ:ಗೋಕಾಕ ನಗರಸಭೆಗೆ ಪ್ರಕಾಶ ಮುರಾರಿ ಅಧ್ಯಕ್ಷ , ಉಪಾಧ್ಯಕ್ಷೆಯಾಗಿ ಬೀಬಿಬತೂಲ್ ಜಮಾದಾರ ಅವಿರೋಧ ಆಯ್ಕೆ

ಗೋಕಾಕ ನಗರಸಭೆಗೆ ಪ್ರಕಾಶ ಮುರಾರಿ ಅಧ್ಯಕ್ಷ , ಉಪಾಧ್ಯಕ್ಷೆಯಾಗಿ ಬೀಬಿಬತೂಲ್ ಜಮಾದಾರ ಅವಿರೋಧ ಆಯ್ಕೆ
ಗೋಕಾಕ ಅ 30 : ನಗರದ ನಗರಸಭೆಗೆ ಶುಕ್ರವಾರದಂದು ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪ್ರಕಾಶ ಮುರಾರಿ ಮತ್ತು ಉಪಾಧ್ಯಕ್ಷರಾಗಿ ಬೀಬಿಬತೂಲ್ ಅಬ್ದುಲ್ ಜಮಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಹಿಂದುಳಿದ ಬ ವರ್ಗ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
ನೂತನ ಅಧ್ಯಕ್ಷ ಪ್ರಕಾಶ ಮುರಾರಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ , ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ್ ಹಾಗೂ ನಗರಸಭೆಯ ಸರ್ವ ಸದಸ್ಯರು ಮತ್ತು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಕಾಕ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ತಿಳಿಸಿದರು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಕಾರ್ಯನಿರ್ವಹಿಸಿದರು.
ಬಳಿಕ ನೂತನ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ ಮತ್ತು ಬಿ
ಬೀಬಿಬತೂಲ್ ಜಮಾದಾರ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಧುರೀಣ ಅಮರನಾಥ ಜಾರಕಿಹೊಳಿ
ನಗರಸಭೆ ಸದಸ್ಯರು, ಮುಖಂಡರು, ಶಾಸಕರ ಅಪ್ತ ಸಹಾಯಕರಾದ ಭೀಮಗೌಡ ಪೊಲೀಸ್ ಗೌಡರ ಉಪಸ್ಥಿತರಿದ್ದರು.
” ಗೋಕಾಕ ನಗರಸಭೆ ಅಭಿವೃದ್ಧಿಗೆ ಬದ್ಧನಾಗಿದ್ದು, . ನಗರದ ಏಳಿಗೆಗೆ ಸರ್ಕಾರದ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು . ನೂತನ ಅಧ್ಯಕ್ಷ-ಉಪಾಧ್ಯಕ್ಷರು ಸ್ಥಳೀಯ ಮಟ್ಟದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅವರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲು ಸಿದ್ಧನಿದ್ದೇನೆ”.
– ರಮೇಶ ಜಾರಕಿಹೊಳಿ ಗೋಕಾಕ ಶಾಸಕ