ಖಾನಾಪುರ: ತುಂಬಿ ತುಳುಕುತ್ತಿವೆ ಕಸದ ಡಬ್ಬಿಗಳು, ಕುಡಿಯಲು ನೀರಿಲ್ಲಾ: ಖಾನಾಪೂರ ಬಸ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ
ತುಂಬಿ ತುಳುಕುತ್ತಿವೆ ಕಸದ ಡಬ್ಬಿಗಳು, ಕುಡಿಯಲು ನೀರಿಲ್ಲಾ: ಖಾನಾಪೂರ ಬಸ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ
ವಿಶೇಷ ಲೇಖನ: ಕಾಶೀಮ ಹಟ್ಟಿಹೊಳಿ, ಖಾನಾಪೂರ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ವಚ್ಛ ಭಾರತದ ಕನಸಿನೊಂದಿಗೆ ಹೆಜ್ಜೆ ಇಡುತ್ತಿದ್ದರೆ, ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾತ್ರ ಸ್ವಚ್ಛತೆಯ ಅರಿವು ಪ್ರಯಾನಿಕರಿಗೂ ಇಲ್ಲ ನಿಲ್ದಾಣದ ನಿರ್ವಾಹಕರಿಗೂ ಇಲ್ಲ. ನಿಲ್ದಾಣದೊಳಗೆ ಕಸ ಹಾಕುವ ಡಬ್ಬಿಗಳು ತುಂಬಿ ತುಳುಕುತ್ತಿವೆ. ಹೀಗಾಗಿ ಕಸ ಕಡ್ಡಿ ಎಲ್ಲೆಡೆ ಹರವಿ ನಿಲ್ದಾಣ ಕೊಳಚೆಯಾಗಿದೆ.
ಪ್ರಯಾಣಿಕರು ಮುಗು ಮುಚ್ಚಿಕೊಂಡು ಕುಳಿತುಕೊಳ್ಳುವ ಸ್ಥಿತಿ ಇದೆ. ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್, ಕಸ, ಎಲ್ಲೆಂದರಲ್ಲಿ ಬಿದ್ದಿದ್ದು ಇದು ಬಸ್ ನಿಲ್ದಾಣವೋ ಅಥವಾ ಕಸದ ತೊಟ್ಟಿಯೊ ಎಂಬ ಅನುಮಾನ ಬರುತ್ತಿದೆ. ಇಲ್ಲಿಯ ಶೌಚಾಲಯಗಳು ಸಂಪೂರ್ಣ ಹಾಳಾಗಿದ್ದು, ಸ್ವಚ್ಛತೆ ಇಲ್ಲದಿರುವುದರಿಂದ ಗಬ್ಬೆದ್ದು ನಾರುತ್ತಿವೆ. ಪಟ್ಟಣದ ಜನರು ಹಾಗೂ ಮುಖಂಡರು ಅನೇಕ ಬಾರಿ ಮೇಲಾಧಿಕಾರಿಗಳಿಗೆ ಹಾಗೂ ಅಭಿಯಂತರಿಗೆ ತಿಳಿಸಿದರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂಧನೆ ನೀಡುತ್ತಿಲ್ಲಾ.
ಯಾವ ಊರಿನ ಬಸ್ ನಿಲ್ದಾಣಯನ್ನಲು ಸರಿಯಾದ ನಾಮಫಲಕವೂ ಇಲ್ಲ. ಗೊಡೆಗಳಿಗೆ ಯಾವ ವರ್ಷ ಬಣ್ಣ ಬಳಿಯಲಾಗಿದೆ ಎಂಬ ಅನುಮಾನ ಕಾಡತೊಡಗಿದೆ. ಪ್ರಯಾಣಿಕರಿಗೆ ಕುಡಿಯಲು ನೀರಿಲ್ಲ, ಶೌಚಾಲಯದಲ್ಲಿ ಉಪಯೋಗಿಸಲು ನೀರಿಲ್ಲ, ಉಪಹಾರಕ್ಕೆ ಕ್ಯಾಂಟಿನ್ ವ್ಯವಸ್ಥೆ ಸರಿಯಾಗಿ ಇಲ್ಲ. ಹೀಗಾಗಿ ದೂರದ ಊರುಗಳಿಂದ ಬಂದ ಜನರು ಉಪಹಾರ ನೀರು ತರಲು ಹೋಗಿ ಕೆಲವು ಬಾರಿ ಬಸ್ ತಪ್ಪಿಸಿಕೊಂಡ ಘಟನೆಗಳು ನಡೆದಿವೆ. ಪಟ್ಟಣದ ಬಸ್ ನಿಲ್ದಾಣದಿಂದ ಧಾರವಾಡ, ಹಳಿಯಾಳ, ಬೆಳಗಾವಿ ಹಾಗೂ ಅಕ್ಕ-ಪಕ್ಕದ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ. ಇಲ್ಲಿನ ನಿಯಂತ್ರಕರಿಗೆ ಮಾಹಿತಿ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದೆ.
ರಾಜ್ಯ ಹಾಗೂ ಹೋರ ರಾಜ್ಯ ಸಂಪರ್ಕಿಸುವ ರಸ್ತೆ ಮಾರ್ಗವಿದ್ದರೂ ಜಿಲ್ಲೆಯ ಗಡಿಭಾಗದ ತಾಲೂಕು ಆಗಿರುವುದರಿಂದ ರಾಜ್ಯ ಹಾಗೂ ಹೋರ ರಾಜ್ಯದ ಬಸ್ಸುಗಳು ಈ ಬಸ್ ನಿಲ್ದಾಣದ ಮೂಲಕ ಹಾದೂ ಹೊಗುತ್ತವೆ. ತಡ ರಾತ್ರಿ ನಿಲ್ದಾಣಕ್ಕೆ ಬರುವುದರಿಂದ ಪ್ರಯಾಣಿಕರು ಕಾದು ಕುಳಿತುಕೊಂಡಿರುತ್ತಾರೆ. ನಿಲ್ದಾಣದಲ್ಲಿ ಸರಿಯಾದ ವಿದ್ಯುತ್ ದೀಪಗಳಿಲ್ಲ, ನಿಲ್ದಾಣದ ಎದುರುಗಡೆ ಗಿಡಗಂಟಿಗಳು ಬೆಳೆದಿರುವುದರಿಂದ ಮಕ್ಕಳು ಹಾಗೂ ಪ್ರಯಾಣಿಕರು ಭಯದ ವಾತಾವರಣದಲ್ಲಿ ಬಸ್ಸಿಗೆ ಕಾಯಬೇಕಾದ ಸ್ಥಿತಿ ಇದೆ.
ಖಾನಾಪೂರ ಪಟ್ಟಣದಲ್ಲಿರುವ ಈ ಬಸ್ ನಿಲ್ದಾಣ ಖಾನಾಪೂರ ಕೆ.ಎಸ್.ಆರ್.ಟಿ.ಸಿ. ಘಟಕಕ್ಕೆ ಅಂಟಿಕೊಂಡು ಇದ್ದರೂ ಮೂಲ ಭೂತ ಸೌಲಭ್ಯ ವಂಚಿತವಾಗಿದೆ. ಈಗ ಈ ಬಸ್ ನಿಲ್ದಾಣದ ಮುಂದಿನ ಸ್ಥಿತಿ ಎನೆಂಬುದು ಪ್ರಯಾಣಿಕರಲ್ಲಿ ಕಾಡತೊಡಗಿದೆ.
ಇರ್ಫಾನ ತಾಳಿಕೊಟಿ, ಖಾನಾಪೂರ ತಾಲೂಕು ಯುವ ಕಾಂಗ್ರೇಸ್ ಅಧ್ಯಕ್ಷರು:
ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡಲು ಮೇಲಾಧಿಕಾರಿಗಳಿಗೆ ಹಲವೂ ಬಾರಿ ಮನವಿ ಮಾಡಿದ್ದೇವೆ ಇಲ್ಲಿಯ ಕುಂದುಕೊರತೆಗಳ ಬಗ್ಗೆ ಖಾನಾಪೂರ ಘಟಕದ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇವೆ. ಇನ್ನು ಮುಂದೆಯಾದರು ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಕ್ಷಾ, ಹಳ್ಳಿಯ ವಿದ್ಯಾರ್ಥಿನಿ:
ಬಸ್ಸುಗಳು ನಿಗದಿತ ವೇಳೆಗೆ ಬಸ್ಸು ನಿಲ್ದಾಣದಿಂದ ಹೋರಡದೆ ಇರುವುದರಿಂದೆ ಕ್ಲಾಸಿಗೆ ಸರಿಯಾದ ಸಮಯಕ್ಕೆ ಹೋಗಲು ಆಗುತ್ತಿಲ್ಲ್ ಹಾಗೂ ನಮ್ಮ್ ಮುಂದಿನ ಕಾರ್ಯಗಳಿಗೆ ತುಂಭಾ ಅನುಕೂಲ ಅನುಭವಿಸುವಂತಾಗಿದೆ.