ಬೆಳಗಾವಿ:ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ ಸಾವು , ಮಧ್ಯರಾತ್ರಿ ಘಟನೆ
ಕಾರು ಬೈಕ್ ನಡುವೆ ಡಿಕ್ಕಿ : ಸ್ಥಳದಲ್ಲೇ ಮಹಿಳೆಯೋರ್ವಳ ಸಾವು , ಮಧ್ಯರಾತ್ರಿ ಘಟನೆ
ಬೆಳಗಾವಿ ನ 26: ನಿನ್ನೆ ತಡರಾತ್ರಿ ನಗರದ ಕಾಲೇಜು ರಸ್ತೆಯ ಸನ್ಮಾನ ಹೊಟೇಲ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಖಡಕ್ ಗಲ್ಲಿಯ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಮಧ್ಯರಾತ್ರಿ ಒಂದು ಘಂಟೆಗೆ ನಡೆದಿದೆ
ಖಡಕ್ ಗಲ್ಲಿಯ ಸ್ಮಿತಾ ಗಜಾನನ ಜಾಧವ( 47) ಮೃತ ದುರ್ಧೈವಿ ಎಂದು ಗುರುತಿಸಲಾಗಿದೆ
ಸ್ಮೀತಾ ಜಾಧವ ಮತ್ತು ಇವಳ ಪತಿ ಗಜಾನನ ಜಾಧವ ಅವರು ರಾತ್ರಿ ಸಬಂಧಿಕರ ಮನೆಯಿಂದ ಕಾರ್ಯಕ್ರಮ ಮುಗಿಸಿ ಖಡಕ್ ಗಲ್ಲಿಯ ಮನೆಗೆ ಮರಳುತ್ತಿರುವಾಗ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಬೈಕ ಸವಾರ ಸ್ಮೀತಾ ಜಾಧವ ಗೆ ತೆಲೆಗೆ ಗಂಭೀರ ಗಾಯವಾದ ಕಾರಣ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಸ್ಮೀತಾ ಜಾಧವ ಮೃತಪಟ್ಟಿದ್ದು ಪತಿ ಗಜಾನನ ಜಾಧವ (55) ಚಿಕಿತ್ಸೆ ಪಡೆಯುತ್ತಿದ್ದಾನೆ
ತಿರುವಿನಲ್ಲಿ ಅಮಿತ ವೇಗದಲ್ಲಿದ್ದ ಹಿಂದಿನಿಂದ ಬರುತ್ತಿದ್ದ ಕಾರೊಂದು (KA-22, M-2125) ಗುದ್ದಿದ ಕಾರಣ ತಲೆಗೆ ಗಂಭೀರ ಪೆಟ್ಟುಗೊಂಡ ಸ್ಮೀತಾ ಉಪಚಾರ ಫಲಿಸದೇ ಸಾವನಪ್ಪಿದರು ಎನ್ನಲಾಗಿದೆ. ಚಾಂದು ಗಲ್ಲಿಯ ಗಜಾನನ ಜಾಧವ ರೇಷನ್ ಅಂಗಡಿ ನಡೆಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಟ್ರಾಫಿಕ್ ದಕ್ಷಿಣ ಠಾಣೆ ಪೊಲೀಸರು ವೇಗದ ಕಾರು ಚಾಲಕನ ಮೇಲೆ ಕೇಸ್ ದಾಖಲಿಸಿದ್ದಾರೆ.
