RNI NO. KARKAN/2006/27779|Friday, August 1, 2025
You are here: Home » breaking news » ಘಟಪ್ರಭಾ:ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ

ಘಟಪ್ರಭಾ:ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ 

ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ : ಶಾಸಕ ಬಾಲಚಂದ್ರ

ಘಟಪ್ರಭಾ ಜ 24: ಕಣ್ಣಿಗೆ ಕಾಣುವ ಮೊದಲ ದೇವರು ತಂದೆ-ತಾಯಿ. ಹೆತ್ತವರನ್ನು ಪ್ರೀತಿಸಿ ಅವರಿಗೆ ಗೌರವ ನೀಡಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರ ರಾತ್ರಿ ಸಮೀಪದ ಸಂಗನಕೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜೀವನ ಪವಿತ್ರವಾಗಬೇಕಾದರೇ ಹಿರಿಯರಿಗೆ ಆದರದ ಗೌರವ ನೀಡಬೇಕು. ಉತ್ತಮ ಸಂಸ್ಕಾರ ಬೆಳೆಸಿಕೊಂಡರೆ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ದೇವನೊಬ್ಬ ನಾಮ ಹಲವು ಎಂಬಂತೆ ಭೂಮಿಯ ಎಲ್ಲ ಕಡೆಗಳ ಚರಾಚರ ವಸ್ತುಗಳಲ್ಲಿ ದೇವರಿದ್ದಾನೆ. ಸಾವಿರಾರು ಜಾತಿ,ಮತ,ಪಂಥಗಳಿದ್ದರೂ ಆಚಾರ-ವಿಚಾರಗಳಲ್ಲಿ ಎಲ್ಲರೂ ಏಕತೆಯಿಂದ ದೇವರನ್ನು ಆರಾಧಿಸುತ್ತೇವೆ. ಧಾರ್ಮಿಕ ಆಚರಣೆಯಲ್ಲಿ ಭಾರತದಂತಹ ವಿಶಿಷ್ಠ ಹಿನ್ನಲೆಯ ದೇಶ ಮತ್ತೊಂದಿಲ್ಲ. ಕೋಮು ಸಾಮರಸ್ಯಕ್ಕೆ ಭಾರತಕ್ಕೆ ಭಾರತವೇ ಸಾಟಿಯಾಗಿದೆ ಎಂದು ದೇಶದ ಇತಿಹಾಸ ಹಾಗೂ ಸಂಸ್ಕøತಿಯನ್ನು ಸ್ಮರಿಸಿಕೊಂಡರು.
ಸಂಗನಕೇರಿ ಗ್ರಾಮವು ಅರಭಾಂವಿ ಪಟ್ಟಣ ಪಂಚಾಯತಿಯಲ್ಲಿರುವುದರಿಂದ ಅಭಿವೃದ್ದಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಪ್ರತಿವರ್ಷ ಪಟ್ಟಣ ಪಂಚಾಯತಿಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತಿರುವುದರಿಂದ ಅಭಿವೃದ್ದಿ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಗ್ರಾಮದ ಅಭಿವೃದ್ದಿಯಲ್ಲಿ ಎಲ್ಲರೂ ಒಂದಾಗಿ ಕೂಡಿಕೊಂಡು ಕೆಲಸ ಮಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಲಕ್ಷ್ಮೀ ದೇವಸ್ಥಾನದ ಕಟ್ಟಡಕ್ಕೆ ಭೂದಾನ ಮಾಡಿದ ಅರಭಾಂವಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಕಪರಟ್ಟಿ ದಂಪತಿಯನ್ನು ಶಾಸಕರು ಇದೇ ಸಂದರ್ಭದಲ್ಲಿ ಸತ್ಕರಿಸಿದರು.
ವೇದಿಕೆಯಲ್ಲಿ ಅರಭಾಂವಿ ಪಿಕೆಪಿಎಸ್ ಅಧ್ಯಕ್ಷ ಮುತ್ತೆಪ್ಪ ಝಲ್ಲಿ, ಹಿಡಕಲ್ ಡ್ಯಾಮ ಘಯೋನೀಬಸ ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಸ್ಥಳೀಯ ವೇದಮೂರ್ತಿ ಹಿರೇಮಠ ಉಪಸ್ಥಿತರಿದ್ದರು.
ಬಸು ಮಾಳೇದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts: