ಬೆಟಗೇರಿ:ಬೆಟಗೇರಿ ಗ್ರಾಮಕ್ಕೆ ಖಾನಾಪುರ ಅಬಕಾರಿ ನಿರೀಕ್ಷಕ ಮಹೇಶ ಪರೀಟ್ ಭೇಟಿ
ಬೆಟಗೇರಿ ಗ್ರಾಮಕ್ಕೆ ಖಾನಾಪುರ ಅಬಕಾರಿ ನಿರೀಕ್ಷಕ ಮಹೇಶ ಪರೀಟ್ ಭೇಟಿ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 12 :
ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದೆಲ್ಲಡೆ ಲಾಕ್‍ಡೌನ್ ಜಾರಿ ಇದ್ದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿರುವ ಶೃತಿ ಪೆಗ್ಗ್ ಬಾರ್ ಕಳೆದ 20 ದಿನಗಳಿಂದ ಸಂಪೂರ್ಣ ಬಂದ್ ಮಾಡಲಾದ ಹಿನ್ನಲೆಯಲ್ಲಿ ಖಾನಾಪುರ ಅಬಕಾರಿ ನಿರೀಕ್ಷಕ ಮಹೇಶ ಪರೀಟ್ ಅವರು ರವಿವಾರ ಏ.12 ರಂದು ಗ್ರಾಮದ ಶೃತಿ ಪೆಗ್ಗ್ ಬಾರ್‍ಗೆ ಭೇಟಿ ನೀಡಿ, ಮದ್ಯ ಮಾರಾಟ, ಸಂಗ್ರಹದ ದಾಖಲಾತಿ ವಿವರವನ್ನು ಪರಿಶೀಲಿಸಿದರು.
ಅಬಕಾರಿ ಇಲಾಖೆಯ ಪ್ರವೀಣ ಯಡ್ರಾಂವಿ, ಎಮ್.ಜಿ.ಗುಡ್ಡದ, ಹನುಮಂತ ನಾಗನೂರ, ಶೃತಿ ಪೆಗ್ಗ್ ಬಾರ್ ಮಾಲೀಕರಾದ ಎಸ್.ವೈ.ಜೋರಾಪೂರ, ಆರ್.ಇ.ಜೋರಾಪೂರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿ, ಪೆಗ್ಗ್ ಬಾರ್ ಸಿಬ್ಬಂದಿ, ಇತರರು ಇದ್ದರು.