RNI NO. KARKAN/2006/27779|Tuesday, October 14, 2025
You are here: Home » breaking news » ಖಾನಾಪುರ:ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ

ಖಾನಾಪುರ:ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ 

ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ

ಖಾನಾಪೂರ ಜ 23: ತಾಲೂಕಿನ ಇಟಗಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಶಬಾನಾ ಅಣ್ಣಿಗೇರಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಅಥಣಿ ತಾಲೂಕು ಘಟಕದ ದಿವಂಗತ ಡಿ.ಕೆ.ರವಿ ಅಭಿಮಾನಿಗಳ ಬಳಗದ ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ ಲಭಿಸಿದೆ. ಗಣರಾಜ್ಯೋತ್ಸವ ದಿನದಂದು ಅಣ್ಣಿಗೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಶಾಲೆಯ ಮುಖ್ಯ ಶಿಕ್ಷಕ ಆರ.ಬಿ.ಪಾಟೀಲ ಮತ್ತು ಇತರ ಶಿಕ್ಷಕ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.

Related posts: