RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ

ಗೋಕಾಕ:ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ 

ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ

ಗೋಕಾಕ ಜ 23: ನಗರದ ಶ್ರೀ ಬನಶಂಕರಿದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭವು ಮಂಗಳವಾರದಂದು ಸಂಗೋಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಳೆಭಾಂವಿಯ ಶ್ರೀ ಶಿವಾನಂದ ಇಂಗಳಿ ಹಾಗೂ ಬೆಳಗಾವಿಯ ಶ್ರೀ ನಾಗನಾಥ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರ ಸಭೆ ಸದಸ್ಯ ಎಸ್.ಎ.ಕೋತವಾಲ ಆಗಮಿಸಿದ್ದರು.
ಸಮಾರಂಭಕ್ಕೂ ಮುನ್ನ ಅಲಂಕಾರಗೊಂಡ ರಥದಲ್ಲಿ ಕಳಸವನ್ನಿಟ್ಟು, ಮುತ್ತೈದೆಯರ ಪೂರ್ಣಕುಂಭ ಹಾಗೂ ಸಕಲ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ, ಶ್ರೀ ದೇವಿಯ ಗುಡಿಯನ್ನು ತಲುಪಿತು. ದೇವಸ್ಥಾನದಲ್ಲಿ ಶ್ರೀ ಬನಶಂಕರಿದೇವಿಗೆ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಶ್ರೀ ಬನಶಂಕರಿದೇವಿ ಟ್ರಸ್ಟ್ ಕಮೀಟಿ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ, ಶ್ರೀ ಬನಶಂಕರಿದೇವಿ ಪೂಜಾ ಅಕ್ಷಯ ಕಮೀಟಿ, ದೇವಾಂಗ ಯುವಕ ಮಂಡಳ, ಶ್ರೀ ಬನಶಂಕರಿದೇವಿ ಮಹಿಳಾ ಮಂಡಳದವರು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.

Related posts: