ಗೋಕಾಕ:ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ
ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ
ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಜ 5 :
ಭಾರತೀಯ ಸಂಸ್ಕøತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನವಿದ್ದು, ಅದು ಧಾರ್ಮಿಕ ಕಾರ್ಯಗಳ ಒಂದು ಭಾಗವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾ ಘಟಕದ ಅಧ್ಯಕ್ಷ ಸೋಮಶೇಖರ ಮಗದುಮ್ ಹೇಳಿದರು.
ಅವರು ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ಇಲ್ಲಿಯ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತ ತಾಲೂಕಾ ಘಟಕದವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ. ಸಂಗೀತಕ್ಕೆ ಮನಸೋಲದವರಿಲ್ಲ. ಅದಕ್ಕೆ ಅದ್ಭುತವಾದ ಶಕ್ತಿ ಇದ್ದು, ಮಾನಸಿಕ ನೆಮ್ಮದಿ ದೊರೆಯುವುದು.ಬದುಕಿಗೆ ಪೂರಕವಾಗಿ ಬದುಕನ್ನು ಹಸನ್ನಾಗಿಸುವ ಸತ್ಯ ಶುದ್ಧವಾದ ಸಂಗೀತವನ್ನು ಕೇಳುವ ಮೂಲಕ ಆಧ್ಯಾತ್ಮೀಕ ಸಮಾಜವನ್ನು ನಿರ್ಮಿಸಲು ಕರೆ ನೀಡಿದರು.
ವೇದಿಕೆ ಮೇಲೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತ ತಾಲೂಕಾ ಘಟಕದ ಅಧ್ಯಕ್ಷೆ ವಿದ್ಯಾ ಮಗದುಮ್, ಪದಾಧಿಕಾರಿಗಳಾದ ಅನುಸೂಯಾ ದುಳಾಯಿ, ಶಶಿಕಲಾ ಶಿಂಧೆ, ಜಯಾ ಕಮತ, ಕಲಾವಿದರಾದ ಓಂಕಾರ ಕರಕುಂಬಿ, ದಿನೇಶ ಜುಗಳಿ, ಬಾಳಾಸಾಹೇಬ ಕುಲಕರ್ಣಿ ಇದ್ದರು.
ವಿದ್ಯಾ ಗುಲ್ಲ ಸ್ವಾಗತಿಸಿದರು. ಜ್ಯೋತಿ ವರದಾಯಿ ವಂದಿಸಿದರು.