RNI NO. KARKAN/2006/27779|Wednesday, October 15, 2025
You are here: Home » breaking news » ಕೌಜಲಗಿ:ಗೋಸಬಾಳ ಗ್ರಾ.ಪಂ. ಅಧ್ಯಕ್ಷರಿಂದ ಮೊಂಬತ್ತಿ ಬೆಂಕಿಪೊಟ್ಟಣ, ಮಾಸ್ಕ್ ಕಿಟ್ ವಿತರಣೆ

ಕೌಜಲಗಿ:ಗೋಸಬಾಳ ಗ್ರಾ.ಪಂ. ಅಧ್ಯಕ್ಷರಿಂದ ಮೊಂಬತ್ತಿ ಬೆಂಕಿಪೊಟ್ಟಣ, ಮಾಸ್ಕ್ ಕಿಟ್ ವಿತರಣೆ 

ಗೋಸಬಾಳ ಗ್ರಾ.ಪಂ. ಅಧ್ಯಕ್ಷರಿಂದ ಮೊಂಬತ್ತಿ ಬೆಂಕಿಪೊಟ್ಟಣ, ಮಾಸ್ಕ್ ಕಿಟ್ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಕೌಜಲಗಿ ಎ 5 :

 

 

ಸಮೀಪದ ಗೋಸಬಾಳ ಗ್ರಾಮ ಪಂಚಾಯತ ಅಧ್ಯಕ್ಷ ಶಿವಲಿಂಗ ಬಳಿಗಾರ ಅವರು ಗ್ರಾ.ಪಂ. ವ್ಯಾಪ್ತಿಯ ಗೋಸಬಾಳ, ಬಿಲಕುಂದಿ, ಬಗರನಾಳ ಗ್ರಾಮಸ್ಥರಿಗೆ ಮೊಂಬತ್ತಿ, ಬೆಂಕಿಪೊಟ್ಟಣ, ಮಾಸ್ಕ್ ವಸ್ತುಗಳ ಕಿಟ್‍ನ್ನು ರವಿವಾರ ವಿತರಿಸಿದರು.
ಗ್ರಾ.ಪಂ. ಅಧ್ಯಕ್ಷ ಶಿವಲಿಂಗ ಬಳಿಗಾರ ಅವರು ತಮ್ಮ ಒಂದು ವರ್ಷದ ಅಧ್ಯಕ್ಷರ ಗೌರವಧನದ ಮೊತ್ತವನ್ನು ಸೇರಿಸಿ ಅಂದಾಜು ರೂಪಾಯಿ 70 ಸಾವಿರ ಹಣದಲ್ಲಿ ಕಿಟ್‍ನ್ನು ನೀಡಿದರು. ಮೂರು ಗ್ರಾಮಗಳ ಸುಮಾರು 3000 ಕುಟುಂಬಗಳಿಗೆ ರವಿವಾರ ರಾತ್ರಿ 9:00 ಗಂಟೆಗೆ ಜ್ಯೋತಿ ಪ್ರಜ್ವಲನೆ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡಲು ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸುತ್ತ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶ ಬಾಂಧವರಿಗೆ ರವಿವಾರ ರಾತ್ರಿ ಜ್ಯೋತಿ ಪ್ರಜ್ವಲನೆ ಆಚರಣೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಅಗತ್ಯವಸ್ತುಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಮೊಂಬತ್ತಿ ಮಾಸ್ಕ್ ಜ್ಯೋತಿ ಪ್ರಜ್ವಲನೆ ವಸ್ತುಗಳ ವಿತರಣೆ ಸಂದರ್ಭದಲ್ಲಿ ಗೋಸಬಾಳ ಗ್ರಾ.ಪಂ. ಪಿಡಿಓ ಯಲ್ಲಪ್ಪ ಹೊಸಮನಿ, ಪರಮೇಶ್ವರ ಕಡಕೋಳ, ಸುಭಾಸ ಹಾವಾಡಿ, ಶಿವಾನಂದ ಶಿವಾಪೂರ, ಭೀಮಶೆಪ್ಪ ಹರಿಜನ, ಆರೋಗ್ಯ ಇಲಾಖೆ ಕಿರಿಯ ಸಹಾಯಕಿ ಸುರೇಖಾ ಹಿರೇಹೊಳಿ, ಆಶಾ ಕಾರ್ಯಕರ್ತೆಯರಾದ ಕಲಾವತಿ ಬಾರ್ಕಿ, ಲಕ್ಷ್ಮವ್ವ ಬಂಗಾರಿ, ಸುನಂದಾ ಅಂಗಡಿ, ಗೀತಾ ಗೌಡರ, ಬಿ.ಪಿ.ಬುಳ್ಳಿ, ಶಂಕರ ಕಂಬಾರ, ಗೋಸಬಾಳ, ಬಿಲಕುಂದಿ, ಬಗರನಾಳ ಗ್ರಾಮಗಳ ಮುಖಂಡರು ಹಾಜರಿದ್ದರು.

Related posts: