RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ನಿರುಪಯುಕ್ತ ಕೊಳವೆ ಭಾವಿ ಮುಚ್ಚಬೇಕು -ಬಿ.ಆಯ್.ದೇವಡಿ

ಗೋಕಾಕ:ನಿರುಪಯುಕ್ತ ಕೊಳವೆ ಭಾವಿ ಮುಚ್ಚಬೇಕು -ಬಿ.ಆಯ್.ದೇವಡಿ 

ನಿರುಪಯುಕ್ತ ಕೊಳವೆ ಭಾವಿ ಮುಚ್ಚಬೇಕು -ಬಿ.ಆಯ್.ದೇವಡಿ
ಗೋಕಾಕ ಜ 19: ಗೋಕಾಕ ತಾಲೂಕಿನ ಕೌಜಲಗಿ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿರುವ ನಿರುಪಯುಕ್ತ ಕೊಳವೆಭಾವಿಗಳನ್ನು ಸಂಬಂಧಿಸಿದ ರೈತರು, ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮುಚ್ಚಬೇಕೆಂದು ಕೌಜಲಗಿ ಉಪತಹಶೀಲ್ದಾರ ಬಿ.ಆಯ್. ದೇವಡಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ದೇವಡಿಯವರು ನಿರುಪಯುಕ್ತ ತೆರೆದ ಕೊಳವೆಭಾವಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅವುಗಳನ್ನು ಪತ್ತೆ ಹಚ್ಚಿ ಮುಚ್ಚಿಸುವ ಕೆಲಸವನ್ನು ಶೀಘ್ರದಲ್ಲೆ ಆರಂಭಿಸಲಾಗುತ್ತದೆ. ಯಾರಾದರೂ ನಿರುಪಯುಕ್ತ ಕೊಳವೆಭಾವಿಗಳನ್ನು ಹಾಗೆಯೇ ದುಸ್ಥಿತಿಯಲ್ಲಿ ತೆರೆದಿದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವದು. ರೈತರು, ನಾಗರಿಕರು ಸ್ವ-ಕಾಳಜಿಯಿಂದ ಇಂತಹ ಕೊಳವೆಭಾವಿಗಳನ್ನು ಮುಚ್ಚುವಂತೆ ನೋಡಿಕೊಳ್ಳಬೇಕು. ಕೊಳವೆಭಾವಿ ಕೊರೆಸುವವರು ಕಡ್ಡಾಯವಾಗಿ ಅಧಿಕಾರಿಗಳ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ದೇವಡಿ ಹೇಳಿದರು.

Related posts: