ಗೋಕಾಕ:ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ

ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ
ಗೋಕಾಕ ಜ, 17 ;- ಸತೀಶ ಜಾರಕಿಹೊಳಿ ಪೌಂಡೇಶನ ಅಡಿಯಲ್ಲಿ 17ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ನಾಳೆ ದಿ. 18ರಿಂದ 21ರವರೆಗೆ ನಾಲ್ಕು ದಿನಗಳ ಕಾಲ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ‘ಮೈಸೂರು ಅರಮನೆ’ ಮಾದರಿಯ ಐತಿಹಾಸಿಕ ಭವ್ಯ ವೇದಿಕೆ ಮೇಲೆ ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ ಎಂದು ಸಂಘಟಕರಾದ ಎಸ್.ಎ.ರಾಮಗಾನಟ್ಟಿ ಹಾಗೂ ರಿಯಾಜ ಚೌಗಲಾ ತಿಳಿಸಿದರು.
ಅವರು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿಯ ಭವ್ಯ ವೇದಿಕೆ ಬಳಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಅಂತಿಮ ಹಂತದ ಸ್ಪರ್ಧೆಗಳ ವಿವರ ನೀಡಿದರು.
ಪ್ರಥಮ ಹಂತದ ಸ್ಪರ್ಧೆಗಳಲ್ಲಿ 4750 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಂತೆ ದ್ವಿತೀಯ ಹಂತದಲ್ಲಿ 1600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈಗ ಅಂತಿಮ ಹಂತ ಸ್ಪರ್ಧೆಗಳಲ್ಲಿ 845 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ ಅವರು ಸ್ಪರ್ಧಾ ವಿಜೇತರಿಗೆ 120 ಟ್ರೋಫಿಗಳು ಹಾಗೂ 13 ಲಕ್ಷ 78 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಈ ಅಂತಿಮ ಹಂತದ ಸ್ಪರ್ಧೆಗಳಲ್ಲಿ ಗಾಯನ, ಜಾನಪದ ಗಾಯನ, ಭಾವಗೀತೆ, ಹಾಸ್ಯಾಭಿನಯ, ಸೋಲೋ ಡ್ಯಾನ್ಸ್, ಕ್ಲಾಸಿಕಲ್ ಡ್ಯಾನ್ಸ್, ಜಾನಪದ ನೃತ್ಯ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳು ನಡೆಯಲಿವೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಅಂತಿಮ ಹಂತದ ಸ್ಪರ್ಧೆ ಆಯೋಜಿಸಿದ್ದರೆ, ಕಾಲೇಜ ವಿಭಾಗದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಅಂತಿಮ ಹಂತದ ಸ್ಪರ್ಧೆಗಳನ್ನು ನಡೆಸಲಾಗುವುದು.
ಅಂತಿಮ ಹಂತದ ಸ್ವರ್ಧೆಗಳನ್ನು ವಿಧ್ಯಾರ್ಥಿಗಳಾದ ಸಾವಿತ್ರಿ ಕರಗುಪ್ಪಿ ಮತ್ತು ಸಾಹಾ ನರಗುಂದ ಬಾಬಾ ಉದ್ಘಾಟನೆ ಮಾಡಲ್ಲಿದ್ದಾರೆ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಅಲ್ಲದೇ ಗೋಕಾಕ ತಾಲೂಕಿಗೆ ಕಳೆದ ಸಾಲಿನಲ್ಲಿ ವಿವಿಧ ಶೈಕ್ಷಣಿಕ ಪದವಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದೆಂದು ರಾಮಗಾನಟ್ಟಿ ಮತ್ತು ರಿಯಾಜ ಚೌಗಲಾ ತಿಳಿಸಿದರು.