RNI NO. KARKAN/2006/27779|Saturday, August 2, 2025
You are here: Home » breaking news » ಘಟಪ್ರಭಾ:ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು : ಶಾಸಕ ಬಾಲಚಂದ್ರ

ಘಟಪ್ರಭಾ:ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು : ಶಾಸಕ ಬಾಲಚಂದ್ರ 

ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು : ಶಾಸಕ ಬಾಲಚಂದ್ರ
ಘಟಪ್ರಭಾ ಜ 2 : ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಮಠಾಧೀಶರ ಪಾತ್ರ ಹಿರಿದು. ಹದಗೆಡುತ್ತಿರುವ ಸಮಾಜದ ಸ್ವಾಸ್ತ್ಯ ಕಾಪಾಡಲು ಅದು ಮಠಾಧೀಶರಿಂದ ಮಾತ್ರ ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಇಲ್ಲಿಗೆ ಸಮೀಪದ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆಯುತ್ತಿರುವ 19ನೇ ಸತ್ಸಂಗ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಠಾಧೀಶರು ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದಿ ಕಾಪಾಡುತ್ತಿದ್ದಾರೆ. ಇದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತಿದೆ. ಆಚಾರ-ವಿಚಾರ, ಸಂಸ್ಕøತಿ ಮತ್ತೀತರ ಧಾರ್ಮಿಕತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಿಂದಿನ ಭಾರತೀಯ ಸಂಪ್ರದಾಯವನ್ನು ಮಠಾಧೀಶದಿಂದ ನಾವಿಂದು ತಿಳಿದುಕೊಳ್ಳುತ್ತಿದ್ದೇವೆ.. ಇದರಿಂದ ನಮ್ಮ ಜ್ಞಾನ ಬಲವರ್ಧನೆಗೊಳ್ಳುತ್ತ, ಸುಖ-ಶಾಂತಿ ನೆಮ್ಮದಿಯ ಜೀವನಕ್ಕೆ ಸಾಧು-ಶರಣರ ಸಂದೇಶಗಳು ಪ್ರಸ್ತುತವಾಗಿವೆ ಎಂದು ಹೇಳಿದರು.
ಹುಣಶ್ಯಾಳ ಪಿಜಿ ಗ್ರಾಮವು ಇಡೀ ಅರಭಾವಿ ಮತಕ್ಷೇತ್ರವೇ ತನ್ನಡೆಗೆ ಸೆಳೆಯುವ ಮೂಲಕ ಗ್ರಾಮದ ಅಭಿವೃದ್ಧಿಗೆ ಇಲ್ಲಿನ ಸದಸ್ಯರುಗಳು ಶ್ರಮಿಸುತ್ತಿದ್ದಾರೆ. ಸರ್ಕಾರದ ಕೆಲಸಗಳನ್ನು ಉತ್ತಮ ಗುಣಮಟ್ಟದಿಂದ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ನನಗೆ ತುಂಬ ಸಂತಸವಾಗಿದೆ. ಬೇರೆ-ಬೇರೆ ಗ್ರಾಮಗಳಲ್ಲಿಯೂ ಹುಣಶ್ಯಾಳ ಪಿಜಿ ಗ್ರಾಮ ಪಂಚಾಯತಿ ಸದಸ್ಯರ ಕಾರ್ಯಗಳನ್ನು ಗುಣಗಾನ ಮಾಡುತ್ತಿದ್ದೇನೆ ಎಂದು ಸದಸ್ಯರ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿದರು.
ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಖಜಾನೆ ಖಾಲಿಯಾಗುವುದಿಲ್ಲವೆಂದು ಬೈಬಲ್ ತನ್ನ ಗ್ರಂಥದಲ್ಲಿ ತಿಳಿಸಿದೆ. ಅದರಂತೆ ಎಷ್ಟೋ ಕುಟುಂಬಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತ ಬಂದಿರುವೆ. ಇದರಲ್ಲಿಯೇ ನನಗೆ ಆತ್ಮ ತೃಪ್ತಿ ಇದೆ. ಬಡಜನರ ಏಳ್ಗೆಯೇ ನನ್ನ ಗುರಿಯಾಗಿದೆ. ಇದಕ್ಕೆ ತಾಯಿ-ತಂದೆ, ದೇವರು ಹಾಗೂ ಜನರ ಆಶೀರ್ವಾದವೇ ಕಾರಣವಾಗಿದೆ ಎಂದು ಹೇಳಿದರು.
ಸಾನಿಧ್ಯವನ್ನು ವಹಿಸಿದ್ದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ದೇಶದಲ್ಲಿ ಸಾಕಷ್ಟು ಜನ ಶ್ರೀಮಂತರಿದ್ದರೂ ಅವರಿಗೆ ಬಡವರಿಗೆ ಸಹಾಯ ಮಾಡುವ ಗುಣಗಳಿಲ್ಲ. ಅಂತದ್ದರಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಮೂಲೆಮೂಲೆಗಳಿಂದ ಬರುತ್ತಿರುವ ಸಾವಿರಾರು ಬಡ ಕುಟುಂಬಗಳಿಗೆ, ಮಠ-ಮಂದಿರ-ಮಸೀದಿ-ಚರ್ಚಗಳು ಸೇರಿದಂತೆ ಯಾರೇ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದರೂ ಅವರನ್ನು ಖಾಲಿ ಕೈಗಳಿಂದ ವಾಪಸ್ಸು ಕಳುಹಿಸದ ಉದಾಹರಣೆ ಇವರಿಗಿಲ್ಲ. ಅಂತಹ ಹೃದಯ ವೈಶಾಲ್ಯದ ದಾನಶೂರ ಕರ್ಣರಿವರು. ಕೊಟ್ಟು ಮರೆಯುವವನೇ ನಿಜವಾದ ದಾನಿಯಾಗುತ್ತಾನೆ. ನೊಂದವರ ಕುಟುಂಬಗಳಿಗೆ ಸಹಾಯಹಸ್ತ ಮಾಡಿದರೂ ತಾನು ಮಾಡದಂತೆ ಇರುವ ಇವರು ಅಪ್ಪಟ ಅಪರಂಜಿ. ವ್ಯಕ್ತಿತ್ವದಿಂದ ವ್ಯಕ್ತಿ ದೊಡ್ಡವನಾಗುತ್ತಾನೆಂದು ಸಮಾಜಕ್ಕೆ ತಿಳಿಸಿರುವ ಬಾಲಚಂದ್ರ ಅವರಂತಹ ವ್ಯಕ್ತಿಗಳು ಸಮಾಜಕ್ಕೆ ಅಪರೂಪವೆಂದು ಬಣ್ಣಿಸಿದರು.
ಹುಣಶ್ಯಾಳ ಪಿಜಿಯ ನಿಜಗುಣ ದೇವರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಭಾಗದ ದೇವರು ಎಂದು ಬಣ್ಣಿಸಿದರು. ಹಸಿದವರಿಗೆ ಅನ್ನ ನೀಡುವ ಪುಣ್ಯವಂತ. ಇವರಂತಹ ಶಾಸಕರನ್ನು ನಾವುಗಳೆಲ್ಲ ಪಡೆದಿರುವುದು ಭಾಗ್ಯವಂತರು. ಅರಭಾವಿ ಭಾಗಕ್ಕೆ ಕಾಮಧೇನು-ಕಲ್ಪವೃಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಬಾಲಚಂದ್ರ ಹಾಗೂ ಶಿವಾನಂದ ಕೌಜಲಗಿ ಅವರು ಶ್ರೀಮಠದ ಎರಡು ಕಣ್ಣುಗಳಿದ್ದಂತೆ. ಮಠದ ಅಭಿವೃದ್ಧಿಯಲ್ಲಿ ಇವರಿಬ್ಬರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 25ನೇ ವರ್ಷ ಸಂಭ್ರಮ ಮಹೋತ್ಸವವನ್ನು ಅತೀ ವಿಜ್ರಂಭನೆಯಿಂದ ಆಚರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು(ಗೌರವಾಧ್ಯಕ್ಷ), ಶಿವಾನಂದ ಕೌಜಲಗಿ(ಅಧ್ಯಕ್ಷ) ಹಾಗೂ ಬಾಲಚಂದ್ರ ಜಾರಕಿಹೊಳಿ(ಕಾರ್ಯಾಧ್ಯಕ್ಷ) ಅವರ ನೇತೃತ್ವದಲ್ಲಿ ಸಂಭ್ರಮೋತ್ಸವ ಅದ್ಧೂರಿಯಾಗಿ ಜರುಗಲಿದೆ ಎಂದು ಕಾರ್ಯಕ್ರಮದ ಮಾಹಿತಿ ನೀಡಿದರು.
ಮಾಜಿ ಸಚಿವ ಶಿವಾನಂದ ಕೌಜಲಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ನಾವಿಬ್ಬರೂ ಬೇರೆ-ಬೇರೆ ಪಕ್ಷದಲ್ಲಿದ್ದರೂ ಬಾಲಚಂದ್ರ ಅವರಂತಹ ವ್ಯಕ್ತಿಗಳು ಸಿಗುವುದು ಅಪರೂಪ. ಅಭಿವೃದ್ಧಿ ಕಾರ್ಯಗಳೇ ಇವರ ಮೂಲಮಂತ್ರವಾಗಿವೆ. ಪ್ರೀತಿಯಿಂದ ಜನರನ್ನು ಗೆದ್ದಿರುವ ಇವರಿಗೆ ರಾಜಕೀಯದಲ್ಲಿ ಎಲ್ಲವೂ ಗೆಲುವು ಆಗಲಿದೆ ಎಂದು ಹೇಳಿದರು.
ವಿಜಯಪುರ ಷಣ್ಮುಖಾರೂಢ ಮಠದ ಶಿವಪುತ್ರ ಮಹಾಸ್ವಾಮಿಗಳು, ಘೋಡಗೇರಿಯ ಮಲ್ಲಯ್ಯ ಸ್ವಾಮಿಗಳು, ಹುಬ್ಬಳ್ಳಿಯ ಷಡಕ್ಷರಿ ಸ್ವಾಮಿಗಳು, ಸಸ್ತಾಪೂರದ ಸದಾನಂದ ಸ್ವಾಮಿಗಳು, ಬೀದರದ ಗಣೇಶ ಮಹಾರಾಜರು, ತೊಂಡಿಕಟ್ಟಿಯ ವೆಂಕಟೇಶ ಮಹಾರಾಜರು, ಹಿಪ್ಪರಗಿಯ ಶಿವರುದ್ರ ಶರಣರು, ಗೂಗದಡಿಯ ಸಿದ್ಧರಾಮ ಸ್ವಾಮಿಗಳು, ಮದರಖಂಡಿಯ ಚಂಪಮ್ಮ ತಾಯಿ, ಬೀದರದ ಸಿದ್ಧೇಶ್ವರಿ ತಾಯಿ, ತುಂಗಳದ ಅನುಸೂಯಾದೇವಿ, ಶಿಶುವಿನ ಹಳ್ಳಿಯ ಶಾಂತಮ್ಮ, ಬೀದರದ ಗಣೇಶ ಮಹಾರಾಜರು, ಕರಿಕಟ್ಟಿಯ ಗುರುನಾಥ ಶಾಸ್ತ್ರಿಗಳು, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ವಕೀಲ ಮುತ್ತೆಪ್ಪ ಕುಳ್ಳೂರ, ರಾಮನಾಯ್ಕ ನಾಯ್ಕ, ತಾಪಂ ಸದಸ್ಯ ಬಸು ಹುಕ್ಕೇರಿ, ರಾಮಚಂದ್ರ ಪಾಟೀಲ, ಮಲೀಕ ಹುಣಶ್ಯಾಳ, ತಾಪಂ ಇಓ ಎಫ್.ಜಿ.ಚಿನ್ನನ್ನವರ, ಜಿಪಂ ಎಇಇ ಎಂ.ಎಂ. ಘೂಳಪ್ಪನವರ, ಹೆಸ್ಕಾಂ ಇಇ ಕೆ.ಬಿ. ಸಣ್ಣಕ್ಕಿ, ಎಇಇ ಎಸ್.ಪಿ. ವರಾಳೆ, ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ವೇದಿಕೆಯಲ್ಲಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಮಠದಿಂದ ಮಹಾಸ್ವಾಮಿಗಳು ಸತ್ಕರಿಸಿದರು.

Related posts: