RNI NO. KARKAN/2006/27779|Friday, February 13, 2026
You are here: Home » breaking news » ಘಟಪ್ರಭಾ:ದಿ. 25 ರಂದು ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ

ಘಟಪ್ರಭಾ:ದಿ. 25 ರಂದು ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ 

ದಿ. 25 ರಂದು ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ

ಘಟಪ್ರಭಾ ಡಿ 20 : ಮಲ್ಲಾಪೂರ ಪಿ.ಜಿ ಪಟ್ಟಣದ ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವವು ದಿ. 25 ರಂದು ಅತೀ ವಿಜೃಂಭಣೆಯಿಂದ ಜರುಗಲಿದೆ.

ಸೋಮವಾರ ರಂದು ಬೆಳಿಗ್ಗೆ 6 ಗಂಟೆಗೆ ರುದ್ರಾಭಿಷೇಕ, 9ಕ್ಕೆ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಸುಮಂಗಲೆಯರಿಂದ ಕಳಸಾರತಿ, ಅಂಬಲಿ ಕೊಡ ಮತ್ತು ವಿವಿಧ ವಾದ್ಯ ಮೇಳದೊಂದಿಗೆ ಆನೆ ಅಂಭಾರಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಮೂರ್ತಿಯ ಭವ್ಯ ಮೆರವಣಿಗೆಯು ವಿಜೃಂಬಣೆಯಿಂದ ಮಲ್ಲಾಪೂರ ಪಿ.ಜಿ.ಯ ಶ್ರೀ ಲಕ್ಷ್ಮಿದೇವಿ ಗುಡಿಯಿಂದ ಹೊರಟು ವಿಠ್ಠಲ ಮಂದಿರ, ಮುಖ್ಯ ಪೇಟೆ, ಮೃತ್ಯುಂಜಯ ವೃತ್ತ. ಶ್ರೀ ಮಲ್ಲಿಕಾರ್ಜುನ ನಗರದ ಮುಖಾಂತರ ಗುಬ್ಬಲಗುಡ್ಡಕ್ಕೆ ತಲುಪುವದು.
ಮದ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆ ಮಹಾ ಪ್ರಸಾದ. 4 ಗಂಟೆಗೆ ಕುಸ್ತಿಗಳು, ಈ ಕುಸ್ತಿಯಲ್ಲಿ ಸತತ ಮೂರು ವರ್ಷ ಗೆದ್ದವರಿಗೆ ಬೆಳ್ಳಿ ಗದೆ ನೀಡಲಾಗುವದು ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು. ಸಾಯಂಕಾಲ 6 ಗಂಟೆಗೆ ದೀಪೋತ್ಸವ, ನಂತರ ವರ್ಣರಂಜಿತ ಸಿಡಿಮದ್ದು ಹಾರಿಸುವದು ರಾತ್ರಿ 10 ಗಂಟೆಗೆ ಭಜನಾ ಮೇಳದವರಿಂದ ಶಿವಭಜನೆ ಕಾರ್ಯಕ್ರಮ ಜರುಗಲಿದೆ. ಎಂದು ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕ ಕಮೀಟಿಯವರು ತಿಳಿಸಿದ್ದಾರೆ.

Related posts: