RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಪಠ್ಯತೇರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ : ಮಲ್ಲಿಕಾರ್ಜುನ ನಿಡಗುಂದ

ಗೋಕಾಕ:ಪಠ್ಯತೇರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ : ಮಲ್ಲಿಕಾರ್ಜುನ ನಿಡಗುಂದ 

ಪಠ್ಯತೇರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ : ಮಲ್ಲಿಕಾರ್ಜುನ ನಿಡಗುಂದ

ಗೋಕಾಕ ಡಿ 19 : ಪಠ್ಯದಷ್ಟೆ ಪಠ್ಯತೇರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆಕ್ಸಫರ್ಢ ಶಾಲೆಯ ಮಕ್ಕಳ ಸಂರಕ್ಷಣಾ ಸಮಿತಿಯ ನಿರ್ದೇಶಕ ಮಲ್ಲಿಕಾರ್ಜುನ ನಿಡಗುಂದ ಹೇಳಿದರು.
ಮಂಗಳವಾರದಂದು ನಗರದ ಎಸ್‍ಎನ್‍ಸಿ ಏಜುಕೇಶನ್ ಸೊಸಾಯಿಟಿಯ ಆಕ್ಸಫರ್ಢ ಶಾಲೆಯ ವಾರ್ಷಿಕ ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಪಠ್ಯದೊಂದಿಗೆ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳುವಂತೆ ಪ್ರೇರಿಪಿಸಬೇಕೆಂದು ಕರೆ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರತಿಭಾನ್ವಿತರಾದರೆ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಶಿಕ್ಷಕರು ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಂಸ್ಥೆ, ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯಪ್ರವೃತ್ತರಾಗಿ ಮಕ್ಕಳ ಭವಿಷ್ಯವನ್ನು ರೂಪಿಸಿವಲ್ಲಿ ಶ್ರಮಿಸಬೇಕೆಂದು ಹೇಳಿದರು.
ವೇದಿಕೆ ಮೇಲೆ ಆಕ್ಸಫರ್ಢ ಶಾಲೆಯ ಮಕ್ಕಳ ಸಂರಕ್ಷಣಾ ಸಮಿತಿಯ ನಿರ್ದೇಶಕರಾದ ಬಾಬು ಮುಳಗುಂದ, ವಿಠ್ಠಲ ಮುರ್ಕಿಭಾಂವಿ, ಪ್ರತಾಪ ಕುಲಕರ್ಣಿ, ಸ್ಥಳೀಯ ಎಲ್‍ಆಯ್‍ಸಿ ಮಾನೇಜರ್ ಶಂಕರ ಹೆಗಡೆ, ಶಾಲೆಯ ಕಾರ್ಯದರ್ಶಿ ಎ.ಎಸ್.ಭಜಂತ್ರಿ, ಮುಖ್ಯೋಪಾಧ್ಯಯಿನಿ ಜೆ.ಎ.ಭಜಂತ್ರಿ ಇದ್ದರು.
ಶಿಕ್ಷಕಿಯರಾದ ಪೂಜಾ ಪಾತ್ರೋಟ ಸ್ವಾಗತಿಸಿದರು, ಸೌಮ್ಯಾ ಎಸ್ ನಿರೂಪಿಸಿದರು, ಮೇಘಾ ಕುರ್ತಕೋಟಿ ವಂದಿಸಿದರು.

Related posts: