RNI NO. KARKAN/2006/27779|Saturday, August 2, 2025
You are here: Home » breaking news » ಮೂಡಲಗಿ:ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗುತ್ತಿದೆ : ಶಾಸಕ ಬಾಲಚಂದ್ರ

ಮೂಡಲಗಿ:ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗುತ್ತಿದೆ : ಶಾಸಕ ಬಾಲಚಂದ್ರ 

ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗುತ್ತಿದೆ : ಶಾಸಕ ಬಾಲಚಂದ್ರ

ಮೂಡಲಗಿ ಡಿ 15: ಎಲ್ಲ ಜಾತಿ-ಧರ್ಮಗಳನ್ನು ಒಗ್ಗೂಡಿಸಿ ಸಮಾನತೆಯಿಂದ ಮತಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ಜೋಕಾನಟ್ಟಿ ಗ್ರಾಮದಲ್ಲಿ ಶುಕ್ರವಾರದಂದು ಗ್ರೇಸ್ ಬ್ಯಾಪ್ಟಿಸ್ಟ್ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ನಾನಾ ಧರ್ಮಗಳಿವೆ. ಜಾತಿಗಳಿವೆ. ಆದರೂ ಎಲ್ಲ ಧರ್ಮಿಯರು ಒಗ್ಗಟ್ಟಿನಿಂದ ಸಹೋದರತ್ವದಿಂದ ಬಾಳಿ ಬದುಕುತ್ತಿದ್ದೇವೆ. ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ಈ ದೇಶದ ಸಂಸ್ಕøತಿ ಇತಿಹಾಸವು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಬೈಬಲ್‍ವು ಎಲ್ಲರೂ ಎರಡು ಹೊತ್ತಿನ ಊಟ ಮಾಡಬೇಕು. ಉಪವಾಸದಿಂದ ಯಾರೂ ಮಲಗಬಾರದು. ನಿರ್ಗತಿಕರಿಗೆ ಸಹಾಯಹಸ್ತ ಚಾಚಬೇಕು. ಅಲ್ಲದೇ ದಾನ ಮಾಡುವಾಗ ಖಜಾನೆ ಖಾಲಿಯಾಗುವುದಿಲ್ಲವೆಂದು ಪ್ರತಿಪಾದಿಸಿದೆ. ಅದರಂತೆ ಜೀವನದುದ್ದಕ್ಕೂ ಬಡವರ ಏಳ್ಗೆಗೆ ಕೈಲಾದಷ್ಟು ಸಹಾಯಹಸ್ತ ಮಾಡುತ್ತಿರುವೆ. ಕಷ್ಟದಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುವುದರಲ್ಲಿ ನನಗೆ ತೃಪ್ತಿ ಇದೆ. ಮುಂದೆನಾಗುತ್ತದೆ ಎಂಬುದನ್ನು ಚಿಂತಿಸುವುದಿಲ್ಲ. ಇದ್ದದ್ದನ್ನೆಲ್ಲ ಜನರಿಗೆ ದಾರೆಯೆರೆಯುತ್ತಿದ್ದೇನೆ. ಕೊಡುವವನು ದೇವರಿದ್ದಾನೆ. ದೇವರಿರುವಾಗ ನಾನೇಕೆ ಅಂಜಲಿ. ದೇವರಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ವ್ಯಾಖ್ಯಾನಿಸಿದರು.
ಅಧ್ಯಕ್ಷತೆಯನ್ನು ಮೂಡಲಗಿ ಮೆಥೋಡಿಸ್ಟ್ ಚರ್ಚನ ಸಭಾಪಾಲಕ ರೇ.ಡ್ಯಾನಿಯಲ್ ಬಾಬು ವಹಿಸಿದ್ದರು.
ಚಿಕ್ಕಬಳ್ಳಾಪೂರದ ಯೇಸು ಪ್ರೇಮಾಲಯ ಬ್ಯಾಪ್ಟಿಸ್ಟ್ ಚರ್ಚನ ರೇ. ವ್ಹಿ. ಸತ್ಯನಾರಾಯಣಪ್ಪ ಅವರು ದೈವ ಸಂದೇಶಕರಾಗಿ ಆಗಮಿಸಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಜೋಕಾನಟ್ಟಿ ಗ್ರಾಮದಲ್ಲಿ ಶುಕ್ರವಾರದಂದು ಗ್ರೇಸ್ ಬ್ಯಾಪ್ಟಿಸ್ಟ್ ಪ್ರಾರ್ಥನಾ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಸತ್ಕರಿಸಲಾಯಿತು.

ಯೇಹುವಿನ ಆಶೀರ್ವಾದ ಯಾರಿಗಿದೆಯೋ ಅವರು ದೇಶವನ್ನು ಆಳುತ್ತಾರೆ. ಅದರಂತೆ ದೇವರ ದಯೆ ಹಾಗೂ ಜನರ ದಯೆ ಇರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆಯುರಾರೋಗ್ಯ, ಅಧಿಕಾರ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಭೀಮಪ್ಪ ಮೋಕಾಶಿ, ಕಲ್ಲಪ್ಪ ಉಪ್ಪಾರ, ಸಾತಪ್ಪ ಕೊಳದುರ್ಗಿ, ಪರಸಪ್ಪ ಬಬಲಿ, ಕುಬೇಂದ್ರ ತೆಗ್ಗಿ, ನಾರಾಯಣ ಸನದಿ, ಅಮೃತ ದಪ್ಪಿನವರ, ಲಕ್ಷ್ಮಣ ತೆಳಗಡೆ, ಬಿ.ಬಿ. ಪೂಜೇರಿ, ಕೃಷ್ಣಪ್ಪ ಬಂಡ್ರೊಳ್ಳಿ, ಸಾಬಪ್ಪ ಬಂಡ್ರೊಳ್ಳಿ, ಗುಂಡುರಾವ್ ಗುಜನಟ್ಟಿ, ಸುಭಾಸ ಸಣ್ಣಕ್ಕಿ, ಪ್ರಭಾಕರ ಬಂಗೆನ್ನವರ, ಸತ್ತೆಪ್ಪ ಕರವಾಡಿ, ಪುಂಡಲೀಕ ಮಾದರ, ಶಿವಾನಂದ ಹೊಸಮನಿ, ಬಿದರಿ, ಮುಂತಾದವರು ಉಪಸ್ಥಿತರಿದ್ದರು. ಯಮನಪ್ಪ ಕರಬನ್ನವರ ವಂದಿಸಿದರು.

Related posts: