RNI NO. KARKAN/2006/27779|Saturday, March 21, 2026
You are here: Home » breaking news » ಗೋಕಾಕ:ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಅವಶ್ಯಕತೆ ಇದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಅವಶ್ಯಕತೆ ಇದೆ : ಮುರುಘರಾಜೇಂದ್ರ ಶ್ರೀ 

ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಅವಶ್ಯಕತೆ ಇದೆ : ಮುರುಘರಾಜೇಂದ್ರ ಶ್ರೀ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 16:

ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಅವಶ್ಯಕತೆ ಇದ್ದು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವಂತೆ ನಗರದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಸೋಮವಾರದಂದು ನಗರದ ಶೂನ್ಯ ಸಂಪಾದನಠದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 2022-23ನೇ ಸಾಲಿನ ಪ್ರಾರಂಭೋತ್ಸವಕ್ಕೆ ಅಕ್ಷತೆಯಲ್ಲಿ ಮಕ್ಕಳಿಂದ ಅಕ್ಷರ ಬರೆಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿದ್ಯೆ ಇಲ್ಲದಿದ್ದರೆ ಬದುಕು ಅಸಾಧ್ಯ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ ಅವರನ್ನೇ ಆಸ್ತಿಗಳನ್ನಾಗಿ ಮಾಡಿ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲಗೋಳಿಸಲು ಶ್ರಮಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಮುಖ್ಯೋಪಾಯರಾದ ಬಿ.ಎಸ್.ಮಠಪತಿ, ಜೆ.ಎ ಮುತ್ತನಾಳ ಹಾಗೂ ಶಿಕ್ಷಕರು  ಸಿಬ್ಬಂದಿಯರು ಉಪಸ್ಥಿತರಿದ್ದರು.

Related posts:

ಬೆಳಗಾವಿ:ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ

ಗೋಕಾಕ:ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಯಿಂದ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ

ಗೋಕಾಕ:ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ…