ಗೋಕಾಕ:ಪಿಎಲ್ ಡಿ ಬ್ಯಾಂಕ್ ಚುನಾವಣೆ : ಸತೀಶ ಮೇಲುಗೈ : ಸಚಿವ ರಮೇಶ ಜಾರಕಿಹೊಳಿ

ಪಿಎಲ್ ಡಿ ಬ್ಯಾಂಕ್ ಚುನಾವಣೆ : ಸತೀಶ ಮೇಲುಗೈ : ಸಚಿವ ರಮೇಶ ಜಾರಕಿಹೊಳಿ
ಗೋಕಾಕ ಸೆ 8 : ಬೆಳಗಾವಿ ಪಿಎಲ್ ಡಿ ಬ್ಯಾಂಕ್ ನ
ಚುನಾವಣೆಯಲ್ಲಿ ಸಹೋದರ ಶಾಸಕ ಸತೀಶ ಜಾರಕಿಹೊಳಿ ಅವರು ಮೇಲುಗೈ ಸಾಧಿಸಿದ್ದಾರೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ
ಶನಿವಾರ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಿ.ಎಲ್.ಡಿ ಬ್ಯಾಂಕಿನ ಚುನಾವಣೆ ಸಹೋದರ ಸತೀಶ ಜಾರಕಿಹೊಳಿ ಅವರ ನಿಲುವಿನಂತೆ ಅವಿರೋಧ ಆಯ್ಕೆ ನಡೆದಿದೆ. ಚುನಾವಣೆಗೆ ಮೊದಲನೇಯ ದಿನವೇ ಅಲ್ಪಸಂಖ್ಯಾತ ಮತ್ತು ಮರಾಠ ಸಮಾಜದ ಒಬ್ಬರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮಾಡುವದಾಗಿ ಯುವರಾಜ ಕದಂ , ಸುಧೀರ ಗಡ್ಡಿ ಮತ್ತು ತೌಸಿಫ ಎಂಬವವರ ಮುಂದೆ ಈ ನಿರ್ಧಾರ ಕೈಗೋಳ್ಳಲಾಗಿತ್ತು ಅದರಂತೆ ನಾವು ಸೂಚಿಸಿದ ಒಮ್ಮತದ ಅಭ್ಯರ್ಥಿ ಆಯ್ಕೆ ಯಾಗಿದ್ದಾರೆ ಇದು ಹೆಬ್ಬಾಳ್ಕರ ಗೆಲುವಲ್ಲ ಸತೀಶನ ಗೆಲವು ಎಂದು ಸಚಿವ ನಿನ್ನೆ ನಡೆದ ಪಿಎಲಡಿ ಚುನಾವಣೆಯನ್ನು ಬಣ್ಣಿಸಿದ್ದಾರೆ
ಬಿ .ಎಸ್. ವಾಯ್ ಮನೆಗೆ ಬಂದರೆ ಸ್ವಾಗತ : ಬಿಜೆಪಿ ಅಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಒಬ್ಬ ಹಿರಿಯ ನಾಯಕರು ಮನೆಗೆ ಬಂದರೆ ಸ್ವಾಗತಿಸುವೆ ಆದರೆ ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಲು ಬಂದರೆ ಅದನ್ನು ಬಲವಾಗಿ ವಿರೋಧಿಸುತ್ತೆನೆ . ನಮ್ಮ ತಂದೆ , ತಾಯಿ ಕಾಲದಿಂದಲೂ ಕಾಂಗ್ರೇಸ ಪಕ್ಷಕ್ಕೆ ನಿಷ್ಪರಾಗಿದ್ದೆವೆ . ಹೈಕಮಾಂಡ್ ನವರ ಯಾರೋಬ್ಬರ ಮಾತು ಕೇಳಿ ನಮ್ಮ ಮನನೋವಿಸುವದು ಸರಿಯಾದ ಕ್ರಮವಲ್ಲ . ನಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ ಸತೀಶ ಜಾರಕಿಹೊಳಿ ಈ ರೇಸನಲ್ಲಿದ್ದಾರೆ ನಾನು ಅವರಿಗೆ ಮುಖ್ಯಮಂತ್ರಿ ಮಾಡಲು ಶ್ರಮಿಸುತ್ತೇನೆ ಯಾರೇ ಬಂದರು ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು
