RNI NO. KARKAN/2006/27779|Sunday, August 23, 2026
You are here: Home » breaking news » ಗೋಕಾಕ:ದಿ. ಕುಮಾರಿ ಅಮೃತಾ ಸಾಲಳ್ಳಿ ಇವರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಗೋಕಾಕ:ದಿ. ಕುಮಾರಿ ಅಮೃತಾ ಸಾಲಳ್ಳಿ ಇವರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ 

ದಿ. ಕುಮಾರಿ ಅಮೃತಾ ಸಾಲಳ್ಳಿ ಇವರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ
ಗೋಕಾಕ ಆ 23 : ದಿ. ಕುಮಾರಿ ಅಮೃತಾ ಸಾಲಳ್ಳಿ ಇವರ ಸ್ಮರಣಾರ್ಥವಾಗಿ ಶ್ರೀ ಸಾಯಿ ಸಮರ್ಥ ಫೌಂಡೇಶನ್ ನೇತೃತ್ವದಲ್ಲಿ ರವಿವಾರದಂದು ನಗರದ ಜೀವನ ಸುರಕ್ಷಾ ಆಸ್ಪತ್ರೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ನವಲಗುಂದದ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದ ಶ್ರೀ ವಿರೇಂದ್ರ ಮಹಾಸ್ವಾಮಿಗಳು ಹಾಗೂ ನಿಡಸೋಸಿಯ ದುರದುಂಡೀಶ್ವರ ಸಿದ್ದಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಶ್ರೀ ಸಾಯಿ ಸಮರ್ಥ ಫೌಂಡೇಶನ್ ಅಧ್ಯಕ್ಷ ಅರುಣ ಮೋನಪ್ಪ ಸಾಲಳ್ಳಿ ಅವರು ಮಾತನಾಡಿ ಇಂದಿನ ಆಧುನಿಕತೆ ಹಾಗೂ ಒತ್ತಡದ ಜೀವನದಲ್ಲಿ ನಾವಿಂದು ಆರೋಗ್ಯದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದ್ದು, ನಮ್ಮ ಆಹಾರ ಪದ್ದತಿಯಲ್ಲಿಯೂ ಕೂಡಾ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಈ ಶಿಬಿರದಲ್ಲಿ ಡಾ.ಮಿಲಿಂದ್ ಕುಲಕರ್ಣಿ ಡಾ.ಶಿವಾನಂದ ಬೂದಿಹಾಳ ಡಾ.ನವೀನ ಗೋಲಭಾವಿ, ಡಾ.ನಾಗೇಂದ್ರ ಪಾಟೀಲ ಡಾ.ಸಲ್ಮಾನ ಬೇಗ್ ಡಾ.ಜಯಕುಮಾರ್ ಪಾಟೀಲ್ ಡಾ. ಶರ್ಮಿಳಾ ಪಾಟೀಲ ಡಾ.ಪ್ರೀತಿ ಚೌಧರಿ ಡಾ|| ಸಚೀನ ವಿಭೂತಿ, ಡಾ.ಆನಂದ್ ಎತ್ತಿನಮನಿಯವರು ಹೃದಯ, ನೇತ್ರ, ದಂತ, ಚರ್ಮ, ಸೇರಿದಂತೆ ಅನೇಕ ಕಾಯಿಲೆಗಳ ಬಗ್ಗೆ ಸುಮಾರು ೬೦೦ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧಗಳ ಜೊತಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ಸತೀಶ ಚಿಪ್ಪಲಕಟ್ಟಿ, ಶ್ರೀ ಸಾಯಿ ಸಮರ್ಥ ಫೌಂಡೇಶನ್ ಸಂಜು ಚಿಪ್ಪಲಕಟ್ಟಿ, ಆನಂದ ಪಾಟೀಲ, ವೀರಭದ್ರಪ್ಪ ಜಂತಿ, ರಜಾಕ ತಳವಾರ, ಸುನೀಲ ಹಿರಗನ್ನವರ, ಸೇರಿದಂತೆ ಅನೇಕರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದರು.

Related posts: