RNI NO. KARKAN/2006/27779|Friday, August 21, 2026
You are here: Home » breaking news » ಗೋಕಾಕ:ದೇವರಾಜ ಅರಸುರವರು ದೂರದೃಷ್ಟಿಯ ನಾಯಕರಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ :ಡಾ.ಮೋಹನ ಭಸ್ಮೆ

ಗೋಕಾಕ:ದೇವರಾಜ ಅರಸುರವರು ದೂರದೃಷ್ಟಿಯ ನಾಯಕರಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ :ಡಾ.ಮೋಹನ ಭಸ್ಮೆ 

ದೇವರಾಜ ಅರಸುರವರು ದೂರದೃಷ್ಟಿಯ ನಾಯಕರಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ :ಡಾ.ಮೋಹನ ಭಸ್ಮೆ

ಗೋಕಾಕ ಆ 20 : ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ, ಭೂ ಸುಧಾರಣೆ ಮತ್ತು ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಿದ ದೂರದೃಷ್ಟಿಯ ನಾಯಕರಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ಗುರುವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ,ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ದಿ.ಡಿ.ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ ಸಮಾರಂಭವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಾಧಕರಾಗಬೇಕು. ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆಡಿಸಿಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು‌.

ದೇವರಾಜ ಅರಸು ಅವರು ಅಧಿಕಾರವನ್ನು ಕೇವಲ ಆಡಳಿತ ನಡೆಸುವ ಸಾಧನವಾಗಿ ನೋಡದೆ, ಸಮಾಜದ ದುರ್ಬಲ ಮತ್ತು ಹಿಂದುಳಿದ ವರ್ಗಗಳ ಬದುಕಿನಲ್ಲಿ ಪರಿವರ್ತನೆ ತರುವ ಅವಕಾಶವೆಂದು ಪರಿಗಣಿಸಿದ್ದರು. ಸಾಮಾಜಿಕ ಸಮಾನತೆ, ಭೂ ಸುಧಾರಣೆ, ಶಿಕ್ಷಣ ಮತ್ತು ಅವಕಾಶಗಳ ವಿಸ್ತರಣೆ ಅವರ ರಾಜಕೀಯ ಚಿಂತನೆಯ ಪ್ರಮುಖ ಅಂಶಗಳಾಗಿದ್ದವು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗಳನ್ನು ಮತ್ತು ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರನ್ನು ಸತ್ಕರಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಪ್ರಮೀಳಾ ಬೇವಿನಗಿಡದ, ತಾಪಂ ಇಓ ಪಿ.ಡಿ.ನೇರಲೇಕರ,ಪೌರಾಯುಕ್ತ ರವಿ ರಂಗಸುಭೆ, ಶಿಕ್ಷಕ ಆರ್.ಎಲ್.ಮಿರ್ಜಿ, ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ, ಎಂ.ಎಚ್.ಗಜಾಕೋಶ, ಎಸ್.ಎಂ.ಹಿರೇಮಠ, ಎ.ಬಿ.ಪಾಟೀಲ ಉಪಸ್ಥಿತರಿದ್ದರು.

Related posts: