ಗೋಕಾಕ:ಜನರನ್ನು ಖುಷಿಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಛಾಯಾಗ್ರಾಹಕರ ಸೇವೆ ಶ್ಲಾಘನೀಯವಾಗಿದೆ : ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಜನರನ್ನು ಖುಷಿಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಛಾಯಾಗ್ರಾಹಕರ ಸೇವೆ ಶ್ಲಾಘನೀಯವಾಗಿದೆ : ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು
ಗೋಕಾಕ ಆ 19 : ಸಮಾಜದ ಎಲ್ಲಾ ವರ್ಗಗಳ ಜನರನ್ನು ಖುಷಿಪಡಿಸುವ ಕಾರ್ಯದಲ್ಲಿ ನಿರತರಾಗಿರುವ ಛಾಯಾಗ್ರಾಹಕರ ಸೇವೆ ಶ್ಲಾಘನೀಯವಾಗಿದೆ ಎಂದು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘ ವತಿಯಿಂದ ಹಮ್ಮಿಕೊಂಡ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಕ್ಯಾಮೆರಾ ಇದ್ದವರು ಎಲ್ಲರೂ ಪೋಟೋಗ್ರಾಫರ ಆಗಲು ಸಾಧ್ಯವಿಲ್ಲ. ತಾಳ್ಮೆಯಿಂದ ಜನರನ್ನು ಖುಷಿಪಡೆಸುವ ಕಾಯಕದಲ್ಲಿ ನಿರತರಾಗಿರುವವರು ನಿಜವಾದ ಛಾಯಾಗ್ರಾಕರು . ಪೋಟೋಗಳು ದಾಖೆಲೆ, ಇತಿಹಾಸ, ಪ್ರಕೃತಿ ಸೌಂದರ್ಯದ, ಪ್ರಕೃತಿ ವಿಕೋಪ ಸೇರಿದಂತೆ ಎಲ್ಲ ಕಥೆಯನ್ನು ಹೇಳುವ ಕಾರ್ಯಮಾಡುತ್ತವೆ.ಜನರನ್ನು ನಗೆಸುವ ಅದ್ಬುತ ಶಕ್ತಿ ಇರುವುದು ಪೋಟೋಗ್ರಾಫರಗೆ ಮಾತ್ರ. ಸಮಾಜದ ಅಂಕುಡೊಂಕಗಳನ್ನು ತಿದ್ದುವ ಶಕ್ತಿಯೂ ಸಹ ಒಂದು ಪೋಟೋಕ್ಕೆ ಇದೆ. ಅಂತಹ ಪವಿತ್ರ ಕಾರ್ಯದಲ್ಲಿ ನಿರತರಾಗಿರುವ ಛಾಯಾಗ್ರಾಹಕರ ಸೇವೆ ಹೀಗೆ ಮುಂದುವರೆಯಲ್ಲಿ ಎಂದ ಅವರು ಕಾಲಕ್ಕೆ ತಕ್ಕಂತೆ ಪೋಟೋಗ್ರಾಫರ ಬದಲಾವಣೆಗೊಂಡು ಕಾರ್ಯನಿರ್ವಹಿಸಿದರೆ ಉತ್ತಮ ಪೋಟೋಗ್ರಾಫರ ಆಗಲುಸಾಧ್ಯ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಪತ್ರಿಕೋದ್ಯಮ ಮತ್ತು ಪೋಟೋಗ್ರಾಫರ ಎರಡು ವೃತ್ತಿಗಳು ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಇಬ್ಬರೂ ಸಹ ಸಮಾಜವನ್ನು ತಿದ್ದುವ ಕಾರ್ಯಮಾಡುತ್ತಿದ್ದಾರೆ. ಪೋಟೋಗ್ರಾಫರ ವೃತ್ತಿ ಒಂದು ಕಲೆ ಇದ್ದಹಾಗೆ. ಎಐ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಛಾಯಾಗ್ರಾಹಕರಾಗಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಛಾಯಾಗ್ರಾಹಕರ ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಛಾಯಾಗ್ರಾಹಕರಿಗೆ ಮತ್ತು ಸಮಾಜದ ಗಣ್ಯವ್ಯಕ್ತಿಗಳಿಗೆ ಸತ್ಕರಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಮದಾಪೂರ ಗ್ರಾಮ ಪಂಚಾಯತ ಮಾಜಿ ಸದಸ್ಯ ಸುರೇಶ್ ಸನದಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಛಾಯಾಗ್ರಾಹಕ ಗಂಗಾಧರ ಕಳ್ಳಿಗುದ್ದಿ ವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಕಲ್ಯಾಣಶೆಟ್ಟಿ, ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ, ಕಿಶೋರ ಭಟ್ಟ, ಅಶೋಕ ನಾಯಿಕ, ಮಲ್ಲಿಕಾರ್ಜುನ ಕೆ.ಆರ್, ಸುರೇಶ ಬಾಳೋಜಿ, ಲಕ್ಷ್ಮಣ ಯಮಕನಮರಡಿ, ಮಧುಸೂದನ ಸೊನಗೋಜಿ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
