RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ

ಗೋಕಾಕ:ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ 

ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 15 :

ಫೆಬ್ರವರಿ 16 ರಂದು ನಗರದ ಸಮುದಾಯ ಭವನದಲ್ಲಿ ಮಧ್ಯಾಹ್ನ 1:30 ಕ್ಕೆ ಪತ್ರಕರ್ತ ಸಾದಿಕ ಎಮ್. ಹಲ್ಯಾಳ ಸಂಪಾದಕತ್ವದಲ್ಲಿ ಮೂಡಿ ಬಂದಿರುವ “ಛಲಗಾರ” ಶಿಕ್ಷಣ ತಜ್ಞ , ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರ ಅಭಿನಂದನ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದು ಛಲಗಾರ ಅಭಿನಂದನ ಗ್ರಂಥ ಸಮಿತಿ ಅಧ್ಯಕ್ಷ ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿ ಕಳೆದ ಐದಾರು ವರ್ಷಗಳಿಂದ ಶೈಕ್ಷಣಿಕವಾಗಿ ಗೋಕಾಕ ವಲಯವನ್ನು ಉತ್ತಂಗಕ್ಕೆ ಒಯ್ಯಲು ಹಗಳಿರುಳು ಶ್ರಮ ವಹಿಸಿ ದುಡಿಯುತ್ತಿರುವ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಶೈಕ್ಷಣಿಕ ಸಾಧನೆಗಳನ್ನು ಪ್ರಚುರ ಪಡೆಸುವ ದಿಸೆಯಲ್ಲಿ ಮತ್ತು ಅವರಿಂದ ಮತ್ತಷ್ಟು ಸಾಧನೆಯಾಗಲಿ ಎಂಬ ಮಹತ್ತರ ಅಭಿಲಾಸೆಯಿಂದ ಸಮಸ್ತ ಗೋಕಾಕ ನಾಡಿನ ಪರವಾಗಿ ಛಲಗಾರ ಎಂಬ ಅಭಿನಂದನ ಗ್ರಂಥವನ್ನು ಅವರಿಗೆ ಅರ್ಷಿಸುತ್ತಿದ್ದೆವೆ .
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು , ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸುವರು , ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ , ಉದ್ಯಮಿ ಲಖನ್ ಜಾರಕಿಹೊಳಿ , ಜಿ‌.ಪಂ ಸದಸ್ಯರಾದ ಟಿ.ಆರ್‌.ಕಾಗಲ , ಮಡೆಪ್ಪ ತೋಳಿನವರ , ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೋತವಾಲ , ಗುಜನಾಳ ಗ್ರಾ.ಪಂ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ.ಪಾತ್ರೋಟ ಉಪಸ್ಥಿತರಿರುವರು , ಛಲಗಾರ ಅಭಿನಂದನ ಗ್ರಂಥವನ್ನು ಖ್ಯಾತ ಸಾಹಿತಿ ರಾಘವೇಂದ್ರ ಪಾಟೀಲ ಲೋಕಾರ್ಪಣೆ ಮಾಡುವರು , ಗ್ರಂಥದ ಕುರಿತು ಸಾಹಿತಿ ಜಯಾನಂದ ಮಾದರ ಮಾತನಾಡಲ್ಲಿದ್ದಾರೆ ಕಾರಣ ಸಾಹಿತ್ಯಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಖಾನಪ್ಪನವರ ಪ್ರಕಟಣೆಯಲ್ಲಿ ವಿನಂತಿಸಿದ್ಧಾರೆ .

Related posts: