ಗೋಕಾಕ:ಕನ್ನಡ ಭಾಷೆಯನ್ನು ಉಳಿಸಿ,ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಗರ ಮೇಲಿದೆ : ಸನತ ಜಾರಕಿಹೊಳಿ

ಕನ್ನಡ ಭಾಷೆಯನ್ನು ಉಳಿಸಿ,ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಗರ ಮೇಲಿದೆ : ಸನತ ಜಾರಕಿಹೊಳಿ
ಗೋಕಾಕ ಡಿ 25 : ಕನ್ನಡ ಭಾಷೆಯನ್ನು ಉಳಿಸಿ,ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಗರ ಮೇಲಿದೆ ಎಂದು ಶ್ರೀ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಶನಿವಾರಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕಿನ ಬಳೋಬಾಳ ಗ್ರಾಮದ ಕರವೇ ಕಾರ್ಯಕರ್ತರ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ ಭಾಷೆ ಇಂದು ಬರೀ ಮಾತೃಭಾಷೆ ಯಾಗದೆ ಅನ್ನದ ಭಾಷೆಯಾಗಿ ಬೆಳೆಯುತ್ತಿದ್ದು, ಅದನ್ನು ಇನ್ನಷ್ಟು ಗಟ್ಟಿಗೋಳಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಮಹಾದೇವ ಮಕ್ಕಳಗೇರಿ, ಉಪಾಧ್ಯಕ್ಷ ಸದಾಶಿವ ಜೋತೆನ್ನವರ, ಬಸಪ್ಪ ಬೆಳವಿ, ಬಸ್ಸು ಕರಿಗಾರ,
ಕಿರಣ ತೊಗರಿ,ಪರಶುರಾಮ ಹರಿಜನ, ಬಸವರಾಜ ಬಡಕವ್ವಗೋಳ, ಭರತ ಸಂಕಣ್ಣವರ ಉಪಸ್ಥಿತರಿದ್ದರು.