RNI NO. KARKAN/2006/27779|Saturday, May 18, 2024
You are here: Home » breaking news » ಗೋಕಾಕ:ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ

ಗೋಕಾಕ:ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ 

ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ
ಗೋಕಾಕ ನ 20 : ನಿರ್ಮಲವಾದ ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ ಪರಿಶುದ್ದ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತಿದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಅವರು ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ ಮಾಸಿಕ ಚಿಂತನ ಗೋಷ್ಠಿಯ 87ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ, ಶ್ರೀಗಳ ಕಿರೀಟ ಪೂಜಾ ಸಮಾರಂಭದ ಪಾವನ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಸದ್ಗುರುವಿನ ಮೇಲೆ ಶೃದ್ಧೆ, ವಿಶ್ವಾಸ ವೃದ್ಧಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು. ಸಿದ್ಧಲಿಂಗ ಗುರುವಿನ ಅದ್ಭುತವಾದ ಶಕ್ತಿ ಅಪಾರವಾಗಿದೆ. ಗುರುವಿನ ಸೇವೆ ಅಮೂಲ್ಯವಾಗಿದೆ, ಮಠಮಾನ್ಯಗಳಿಗೆ ದಾನ ಮಾಡುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ. ಎಲ್ಲ ಸಾಧನೆಗಳಲ್ಲಿ ಸತ್ಸಂಗ ಶ್ರೇಷ್ಠವಾಗಿದೆ. ಸತ್ಸಂಗದಿಂದ ನಿಸ್ಸಂಗ,ನಿಸ್ಸಂಗದಿಂದ ನಿರ್ಮೋಹ, ನಿರ್ಮೋಹದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರಲ್ಲದೇ ಶ್ರೀ ನಿಜಗುಣ ದೇವರು ಸಂಗೀತ, ಸಾಹಿತ್ಯ, ಕಲೆಯ ಸಂಗಮವಾಗಿದ್ದಾರೆ. ಭಾರತೀಯ ಸಂಸ್ಕøತಿ ಎತ್ತಿ ಹಿಡಿಯುವ ಕಾರ್ಯ ನಿಜಗುಣ ದೇವರು ಮಾಡಿದ್ದು, ಧಾರ್ಮಿಕ ವಿಚಾರಗಳನ್ನು ಒಳಗೊಂಡ ಸತ್ಸಂಗ ಸಮ್ಮೇಳನ ಭಾರತೀಯ ಸಂಪ್ರದಾಯದಂತಹ ಕಾರ್ಯಗಳು ಜ್ಞಾನದ ಜ್ಯೋತಿ ಬೆಳಗಬೇಕಾದ ಅವಶ್ಯ ಇದೆ ಎಂದರು.

ಧರ್ಮದಿಂದ ಕಾರ್ಯ ಮಾಡಿದರೆ ಜೀವನ ಸುಂದರವಾಗಿರಲು ಸಾಧ್ಯ. ಮನುಷ್ಯ ಧರ್ಮದಿಂದ ನಡೆದುಕೊಳ್ಳಬೇಕು. ಜ್ಞಾನ ಮೂಲಕ ಲೋಕ ಕಲ್ಯಾಣವಾಗುತ್ತದೆ. ಈ ಭಾಗದ ಶ್ರೀ ನಿಜಗುಣ ದೇವರು ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಈ ಪುಣ್ಯಭೂಮಿ ಜನ್ಮತಾಳಿದ ಭಕ್ತ ಸಮೂಹಕ್ಕೆ ನಾಡಿನ ಮಠಾಧೀಶರ ದರ್ಶನ ಆಶೀರ್ವಾದ ಮಾಡುವ ಮೂಲಕ ಈ ನೆಲ ಸುಕ್ಷೇತ್ರ ಮಾಡಿ ಭಕ್ತರ ಮನ ಗೆದ್ದಿದ್ದಾರೆ. ಸಂಸ್ಕøತಿ, ಸಂಸ್ಕಾರ, ಸಂಗೀತ, ಶೈಕ್ಷಣಿಕ, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದು ಎಲ್ಲರನ್ನು ಪ್ರೀತಿಯಿಂದ ಕಾಣುವ ಮೂಲಕ ಪ್ರೀತಿಯೇ ದೇವರಾಗಿದ್ದಾರೆ. ಸಿದ್ಧಲಿಂಗ ಯತಿರಾಜರ ಪರಮ ಶಿಷ್ಯರಾಗಿ ಗುರುವಿನ ಕೃಪಾಶೀರ್ವಾದದಿಂದ ಗುರುವಿನ ತೊಟ್ಟಿಲೋತ್ಸವ, ಸತ್ಸಂಗ ಸಮ್ಮೇಳನ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ನಿಜಗುಣ ದೇವರು ಜಾತ್ಯಾತೀತವಾಗಿ ಸರ್ವಧರ್ಮೀಯರು ಪ್ರೀತಿಸುವ ಮನೋಭಾವದವರು, ಪಂಚಪೀಠ, ವಿರಕ್ತ, ಸಿದ್ದಾರೂಢ, ದ್ವೈತ, ಅದ್ವೈತ ಸಂಪ್ರದಾಯವೆನ್ನದೇ ಎಲ್ಲರನ್ನು ಗೌರವಿಸುವ ವಿಚಾರವಂತರಾಗಿದ್ದಾರೆ ಎಂದರು.

ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ನಿಜಗುಣ ದೇವರು ಮಾತನಾಡಿ ನಾನು ನನ್ನದು ಎಂಬುದು ಎನಿಲ್ಲ, ಆ ದೇವರು ಆಡಿಸಿದಂತೆ ಆಡುವ ಕಾಯಕ ನಮ್ಮದು. ನಾಡಿನ ಹೆಸರಾಂತ ಸತ್ಪುರುಷರ ಆಶೀರ್ವಾದ, ಮಾರ್ಗದರ್ಶನದಿಂದ ನಾನು ಭಕ್ತರ ಇಚ್ಚೆಯಂತೆ ಆಧ್ಯಾತ್ಮಿಕ ಸೇವೆಗೈಯುತ್ತಿರುವೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಅಧಿಪತಿ ಶ್ರೀ ನಿಜಗುಣ ದೇವರು ಹುಟ್ಟುಹಬ್ಬವನ್ನು ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಿಸಿಕೊಂಡರು.
ಅಧ್ಯಕ್ಷತೆಯನ್ನು ಕಬ್ಬೂರಿನ ಗೌರಿಶಂಕರಮಠದ ಪೂಜ್ಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿದ್ದರು. ಮಹಾಲಿಂಗಪೂರದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಅಣ್ಣಿಗೇರಿ ಆಗಮಿಸಿ ನೀನ್ಯಾಕೊ ನಿನ್ನಹಂಗ್ಯಾಕೊ ಎಂಬ ವಿಷಯದ ಕುರಿತು ಅನುಭಾವ ನೀಡಿದರು.
ಮುತ್ತೇಪ್ಪ ಐದುಡ್ಡಿ ಇವರಿಂದ ಅನ್ನದಾಸೋಹ, ಬಸವರಾಜ ಐದುಡ್ಡಿ ಇವರಿಂದ ಚಿಂತನದಾಸೋಹ, ಹಣಮಂತ ದಾಸರ, ಹಣಮಂತ ಪಾದಗಟ್ಟಿ, ಗಂಗಾಧರ ಕುಂಬಾರ ಹೊಳಿಹೊಸೂರ ಇವರಿಂದ ಸಂಗೀತ ಸೇವೆ ಜರುಗಿತು. ಶ್ರೀ ಸಿದ್ಧಲಿಂಗೇಶ್ವರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Related posts: