RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ : ಭೀಮಶಿ ಭರಮನನ್ನವರ

ಗೋಕಾಕ:ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ : ಭೀಮಶಿ ಭರಮನನ್ನವರ 

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ : ಭೀಮಶಿ ಭರಮನನ್ನವರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 31 :

 
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನನ್ನವರ ಮನವಿ ಮಾಡಿದರು‌‌.

ಸೋಮವಾರದಂದು ಇಲ್ಲಿನ ನಮ್ಮ ಬೆಳಗಾವಿ ಗೆಳೆಯರ ಬಳಗ ಆಯೋಜಿಸಿದ್ದ ಮನೆಯೇ ಮಂತ್ರಾಲಯ ಫೇಸಬುಕ್ಕ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿದರು.

ಇನ್ನು ಮಾರಾಣಾಂತಿಕ ವೈರಾಣು ಹರಡುವಿಕೆ ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಠ 6 ಅಡಿಗಳ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕೈಗೆ ಸೋಪು ಮತ್ತು ನೀರಿನಿಂದ ತೊಳೆಯುವ ಮೂಲಕ ಕೊರೊನಾ ವೈರಸ್‌ಗೆ ಕಡಿವಾಣ ಹಾಕಲು ಸಾಧ್ಯ ಸರಕಾರ ನೀಡುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಿ ಕೊರೋನಾ ಸೋಂಕು ಹರಡದಂತೆ ಎಲ್ಲರೂ ಜಾಗೃತರಾಗಬೇಕು. ಈ ಸಂದರ್ಭವನ್ನು ಬಳಿಸಿಕೊಂಡು ಇಲ್ಲಿಯ ನಮ್ಮ ಬೆಳಗಾವಿ ಗೆಳೆಯ ಬಳಗ ಕಳೆದ ಒಂದು ತಿಂಗಳಿನಿಂದ ಮನೆಯಲ್ಲಿರುವ ನಮಗಾಗಿ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಕಾರ್ಯಕ್ರಮ ಆಯೋಜಿಸದ್ದು ಪ್ರಶಂಶನೀಯ ಇವರ ಕಾರ್ಯಕ್ರಮವನ್ನು ಎಲ್ಲರೂ ಮನೆಯಲ್ಲಿದುಕೊಂಡು ವಿಕ್ಷೀಸಿ ಯಶಸ್ವಿ ಗೊಳಿಸಬೇಕೆಂದು ವಿನಂತಿಸಿದರು.

ನಂತರ ನಗರದ ಗಾಯಕರಾದ ಜೆ.ಕೆ ಕಾಡೇಶಕುಮಾರ ಹಾಗೂ ಸುರೇಶ ನಾಯಿಕ ಅವರು ಸುಪ್ರಸಿದ್ಧ ಹಿಂದಿ ಚಿತ್ರ ಗೀತೆಗಳು ಹಾಡಿ ನೇರ ಪ್ರಸಾರದಲ್ಲಿ ಮನೆಯಿಂದನೆ ಭಾಗವಹಿದ್ದ ನೂರಾರು ವಿಕ್ಷೀಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಪ್ರದೀಪ್ ನಾಗನೂರ, ನಮ್ಮ ಬೆಳಗಾವಿ ಗೆಳೆಯರ ಬಳಗದ ಅಬ್ಬಾಸ ಕೆ ದೇಸಾಯಿ, ಸಾದಿಕ ಹಲ್ಯಾಳ, ಮುಗುಟ ಪೈಲವಾನ, ಖಾಜಾ ಮತ್ತೆ, ಮೋಸಿನ ಮಕಾಂದಾರ, ಶಿವಾನಂದ ಪೂಜೇರಿ, ಮಹಾಂತೇಶ ದಾಸಪ್ಪಗೋಳ, ಕಾಶಿನಾಥ್ ಸವಸುದ್ದಿ ಇದ್ದರು. 

 

Related posts: