ಖಾನಾಪುರ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ
ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ
ಖಾನಾಪುರ ನ 20 : ಪಟ್ಟಣದಲ್ಲಿ ಭಾನುವಾರ ಜರುಗಿದ ತಾಲೂಕಿನ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ತರುಣ ಭಾರತ ದಿನಪತ್ರಿಕೆಯ ವರದಿಗಾರ ಪಿರಾಜಿ ಕುರಾಡೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ವಿಶ್ವವಾಣಿ ವರದಿಗಾರ ಕಾಸೀಂ ಹಟ್ಟಿಹೊಳಿ, ಸಿಟಿ ಕೇಬಲ್ ವರದಿಗಾರ ವಸಂತ ಕಾಳಗೆ, ಮತ್ತು ಪುಢಾರಿ ದಿನಪತ್ರಿಕೆಯ ವರದಿಗಾರ ವಾಸುದೇವ ಚೌಗುಲೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ ಪ್ರಸನ್ನ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿಯಾಗಿ ಇನ್ ಬೆಳಗಾವಿ ವರದಿಗಾರ ಮಹೇಶ ಕದಮ್, ಖಜಾಂಚಿಯಾಗಿ ಪುಢಾರಿ ಪತ್ರಿಕೆಯ ವರದಿಗಾರ ರಾಜು ಕುಂಭಾರ, ಸಂಘದ ಗೌರವಾಧ್ಯಕ್ಷರಾಗಿ ತರುಣ ಭಾರತದ ಪ್ರಕಾಶ ದೇಶಪಾಂಡೆ, ಕಾರ್ಯಾಧ್ಯಕ್ಷರಾಗಿ ವಿಜಯವಾಣಿಯ ಜಗದೀಶ ಹೊಸಮನಿ ಮತ್ತು ಸಕಾಳ ದಿನಪತ್ರಿಕೆಯ ಪರಶುರಾಮ ಪಾಂಡವ ಅವರನ್ನು ಆಯ್ಕೆ ಮಾಡಲಾಯಿತು.
ಸಭೆ ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಪಿರಾಜಿ ಕುರಾಡೆ, ಪತ್ರಕರ್ತರ ಸಂಘದ ಮೂಲಕ ಮುಂಬರುವ ದಿನಗಳಲ್ಲಿ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಿ ವೃತ್ತಿ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಚೇತನ ಲಕ್ಕೆಬೈಲಕರ, ಯಲ್ಲಪ್ಪ ಕಾನರ, ಸುಹಾಸ ಪಾಟೀಲ, ಭರತ ಪಾಟೀಲ, ವಿವೇಕ ಕುರಗುಂದ, ಈಶ್ವರ ಸಂಪಗಾವಿ, ಕಿಶೋರ ಮಿಠಾರಿ, ರುದ್ರಪ್ಪ ಸಂಪಗಾವಿ, ತಿಮ್ಮಪ್ಪ ಗಿರೆಪ್ಪನವರ, ಸುನೀಲ ಚಿಗುಳಕರ, ಎಂ.ಪಿ ಗಿರಿ ಮತ್ತಿತರರು ಇದ್ದರು. ರೂಪಾ ಕುಲಕರ್ಣಿ ಸ್ವಾಗತಿಸಿದರು. ಅಪ್ಪಾಜಿ ಪಾಟೀಲ ನಿರೂಪಿಸಿದರು. ಶಂಕರ ದೇಸೂರಕರ ವಂದಿಸಿದರು.