ಗೋಕಾಕ :ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ

ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಳ್ಳಿ : ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿ
ಬೆಟಗೇರಿ ಜೂ 30 : ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಬದುಕಿನಲ್ಲಿ ಎಷ್ಟೇ ಬಂದೂದ್ದನ್ನು ಪರಮಾತ್ಮನಿಗೆ ಅರ್ಪಿಸಿ, ಉಪಭೋಗಿಸುವದೇ ಪ್ರಸಾದ ಎನಿಸುವುದು. ಜೀವನದಲ್ಲಿ ಬರುವ ಸುಖ ಮತ್ತು ದು:ಖಗಳೆರಡನ್ನು ಭಗವಂತ ನೀಡಿದ ಪ್ರಸಾದವೆಂದು ತಿಳಿದು ಬದುಕುವವನೇ ಪ್ರಸಾದಿ ಎನಿಸಿಕೊಳ್ಳುವವನು ಎಂದು ರಬಕವಿ ಬ್ರಹ್ಮಾನಂದ ಆಶ್ರವiದ ಸದ್ಗುರು ಗುರುಸಿದ್ಧೇಶ್ವರ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಸತತ 48 ದಿನಗಳ ( ಒಂದು ಮಂಡಲ) ವರೆಗೆ ಆಯೋಜಿಸಲಾದ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜೂ.29 ರಂದು ಸಂಜೆ 8.30 ಗಂಟೆಗೆ ನಡೆದ ಚೆನ್ನಬಸವಣ್ಣನವರ ಅಷ್ಟಾವರಣ ಷಟ್ ಸ್ಥ¯ ವಚನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಂಡು, ಸತ್ಯ ಶುದ್ಧತೆಯಿಂದ ಇರಬೇಕೆಂದರು.
ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಠಕ್ಕೆ ಅನ್ನ ದಾಸೊಹ ಸೇವೆಗೈದ ನಾರಾಯಣ ಬಿ. ರಜಪೂತ ದಂಪತಿಗಳನ್ನು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಮಹೊದಯರು, ಸಂತ-ಶರಣರು, ಗಣ್ಯರನ್ನು ಶಾಲು ಹೊದಿಸಿ ಶ್ರೀ ಮಠದ ಪರವಾಗಿ ಸತ್ಕರಿಸಲಾಯಿತು. ಹೊಳೆಹೊಸೂರಿನ ಗಂಗಾಧರ ಕುಂಬಾರ ಅವರ ತಬಲಾ ಸಾಥದೊಂದಿಗೆ ಹಿರೇಕೊಪ್ಪದ ಸಂಕಪ್ಪ ಗುರುಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಚುಳಕಿ ಗವಿಮಠದ ವೀರಸಂಗಯ್ಯ ಮಹಾಸ್ವಾಮಿಜಿ, ಬೆಂಗಳೂರಿನ ಅಶ್ವತಪ್ಪ ಅಜ್ಜನವರು, ಗೂರಗುದ್ಧಿಯ ತುಕಾರಾಮ ಮಹಾರಾಜರು ಸೇರಿದಂತೆ ಸಂತ-ಶರಣರು, ಆಧ್ಯಾತ್ಮ ಆಸಕ್ತರು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತರು, ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕ ಸದಸ್ಯರು, ಮತ್ತೀತರರು ಇದ್ದರು.
ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ಕೊನೆಗೆ ವಂದಿಸಿದರು.