RNI NO. KARKAN/2006/27779|Saturday, May 23, 2026
You are here: Home » breaking news » ಗೋಕಾಕ:ವೃತ್ತಿ ಜೀವನದಲ್ಲಿ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ : ಜೀವನ ಕುಮಾರ್

ಗೋಕಾಕ:ವೃತ್ತಿ ಜೀವನದಲ್ಲಿ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ : ಜೀವನ ಕುಮಾರ್ 

ವೃತ್ತಿ ಜೀವನದಲ್ಲಿ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ : ಜೀವನ ಕುಮಾರ್

ಗೋಕಾಕ ಮಾ 25 : ವೃತ್ತಿ ಜೀವನದಲ್ಲಿ ಎಲ್ಲ ಆಯಾಮಗಳಿಂದಲೂ ಅಭಿವೃದ್ಧಿ ಹೊಂದಬೇಕು ಎಂದರೆ ಉದ್ಯೋಗದಾತ ಕಂಪನಿಗಳ ಸಹಕಾರ ಮುಖ್ಯವಾಗಿದೆ ಎಂದು ಬೆಂಗಳೂರಿನ ಎಸ್ವೀ ರೆಕ್ಯೂಟೆಕ್ ಕಂಪನಿಯ ಎಚ್.ಆರ್. ಮ್ಯಾನೇಜರ್ ಜೀವನ ಕುಮಾರ್ ಹೇಳಿದರು.

ಬುಧವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಪದವಿ ಮಾಹಾವಿದ್ಯಾಲಯ ಬಿ.ಸಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಾಜ್ಯದ ವಿವಿಧ ಕಂಪನಿಗಳಲ್ಲಿ ಉದ್ಯೋಗ ನಿಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಪ್ರತಿಷ್ಠಿತ ಲೆನ್ಸ್ ಕಾರ್ಟ್, ಎಸ್.ಎಸ್.ಪಿ .ಕೆ ಗ್ರೂಪ್ಸ,
ಸನ್ ಬೀಜ ಸಲೂಶನ್,ಜಸ್ಟ್ ಡೈಲ್, ಈ.ಝಡ್. ವಾಯ್ ವೆಂರ್ಚಸ್, ಏಷ್ಯನ್ ಪೇಂಟ್ಸ್, ಈಜಿ ವೆನ್ ಚರ್ಸ್ ಸೇರಿದಂತೆ ಅನೇಕ ಕಂಪನಿಗಳಲ್ಲಿ ಉದ್ಯೋಗವಾಕಾಶ ವಿದ್ದು, ಕೆಲಸಕ್ಕೆ ಸೇರುವ ಮುಂದೆ ವಿದ್ಯಾರ್ಥಿಗಳು ಆಯಾ ಕಂಪನಿಗಳ ಬಗ್ಗೆ ತಿಳಿದು ಕೊಂಡು ಕೆಲಸಕ್ಕೆ ಸೇರಿದರೆ ಧಿರ್ಘಕಾಲ ಕಾರ್ಯನಿರ್ವಹಿಸಲು ಸಾಧ್ಯ. ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗಲೆ ಉದ್ಯೋಗವಕಾಶ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಂಡು ಎಲ್ಲರೂ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳು ನಡೆಸಿದ ಸಂದರ್ಶನದಲ್ಲಿ ತಾಲೂಕಿನ ವಿವಿಧ ಕಾಲೇಜಿನ
ಒಟ್ಟು 227 ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಇಲ್ಲಿನ ಶ್ರೀ ಸಿದ್ದಲಿಂಗೇಶ್ವರ ಮಹಾವಿದ್ಯಾಲಯ 78 ವಿದ್ಯಾರ್ಥಿಗಳು ಹಾಗೂ 100 ಜನ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಆಯ್ಕೆಯಾದರು.

ಈ ಸಂದರ್ಭದಲ್ಲಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟಿ ,ಅಡಿವೇಶ ಗವಿಮಠ,ಅರ್ಪನಾ ಕುಲಕರ್ಣಿ ಉಪಸ್ಥಿತರಿದ್ದರು.

Related posts: