ಘಟಪ್ರಭಾ:ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ
ಜವಹರಲಾಲ ನೆಹರು ಅವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು : ಎಸ್.ಪಿ.ಗೋಸಬಾಳ
ಘಟಪ್ರಭಾ ನ 14: ಸಮೀಪದ ರಾಜಾಪೂರ ಗ್ರಾಮದ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಂಡೀತ ಜವಹರಲಾಲ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಪಿ.ಗೋಸಬಾಳ ಮಾತನಾಡಿ ಭಾರತದ ಮೊದಲ ಪ್ರಧಾನಿ ಪಂಡೀತ ಜವಹರಲಾಲ ನೆಹರು ಅವರು ಮಕ್ಕಳ ಮೇಲೆ ಹಾಗೂ ಗುಲಾಬಿ ಹೂವಿನ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟಿದ್ದರು ಅದ್ದಕಾಗಿಯೇ ಅವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಿ ಎಂದರು ಹೇಳಿ ಹೋಗಿದ್ದಾರೆ. ಇವರ ಆದರ್ಶಯುತವಾದ ಮೌಲ್ಯಗಳು ಸರ್ವಕಾಲಿಕ ಸತ್ಯವಾಗಿದ್ದು ಪ್ರತಿಯೊಬ್ಬ ಮಗುವು ಕೂಡಾ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಯುತವಾಗಿ, ಸತ್‍ಪ್ರಜೆಯಾಗಿ ಬಾಳಬೇಕು ಎಂದು ಹೇಳಿದರು.
ಮಕ್ಕಳಿಗೆ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಭಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾಲಕ-ಪೋಷಕರು ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶಾಲೆಯ ಪ್ರಧಾನ ಗುರುಗಳಾದ ಎನ್.ಡಿ.ಪೂಜೇರಿ ಸ್ವಾಗತಿಸಿದರು. ಸಹ ಶಿಕ್ಷಕೀಯರಾದ ಕು. ದೀಪಾ ಬಬಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಜ್ಯೋತಿ ಬಡಿಗೇರ ವಂದಿಸಿದರು.