RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಭಾರತ ದೇಶ ಸರ್ವ ಧರ್ಮೀಯರ ತ್ಯಾಗ,ಬಲಿದಾನದ ಪ್ರತೀಕ : ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ

ಗೋಕಾಕ:ಭಾರತ ದೇಶ ಸರ್ವ ಧರ್ಮೀಯರ ತ್ಯಾಗ,ಬಲಿದಾನದ ಪ್ರತೀಕ : ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ 

ಭಾರತ ದೇಶ ಸರ್ವ ಧರ್ಮೀಯರ ತ್ಯಾಗ,ಬಲಿದಾನದ ಪ್ರತೀಕ : ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ

 

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 15 :

 

 

ಭಾತರ ದೇಶ ಸರ್ವ ಧರ್ಮೀಯರ ತ್ಯಾಗ ಬಲಿದಾನದ ಪ್ರತೀಕವಾಗಿದೆ ಭಾರತೀಯರೆಲ್ಲ ನಾವು ಸಹೋದರ ಸಹೋದರಿಯರು ಎಂದು ಮಂಗಳೂರಿನ ಅಲ್ ಖಾದಿಸ ಕಾಲೇಜ ಆಫ್ ಇಸ್ಲಾಮಿಕ್ ಸೈಯಿನ್ಸ್ ಪ್ರಾಚಾರ್ಯ ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ ಹೇಳಿದರು

ಗುರುವಾರದಂದು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆರೆ ಸಂತ್ರಸ್ತರೊಂದಿಗೆ ಆಚರಿಸಿದ 73ನೇ ಸ್ವಾತಂತೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು , ಮಾತನಾಡಿದರು

ಇಲ್ಲಿ ಭೂಕಂಪಗಳ ಬರಲಿ,ಇಲ್ಲಿ ಸುನಾಮಿಗಳು ಬರಲಿ, ಇಲ್ಲಿ ನೆರೆಗಳು ಬರಲಿ ಎಲ್ಲವನ್ನು ಕಳೆದುಕೊಂಡರೂ ಸಹ ಹಿಂತಹ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿದ ಭಾವೈಕತೆಯ ದೇಶ ಪ್ರಪಂಚದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪಗಳು ಆವಾಗಾವಾಗ ನಮಗೆ ಎಲ್ಲವನ್ನು ಕಲಿಸುತ್ತಿವೆ ಅದನ್ನು ಅರಿತು ನಾವು ಸಹೋದರತ್ವದಿಂದ ಬಾಳಿ ಬದುಕಬೇಕಾಗಿದೆ. ರಾಜಕೀಯ ಹಿತಾಸಕ್ತಿಗಾಗಿ ,ಧಾರ್ಮಿಕವಾಗಿ ಕೆಲ ಜನರು ತಮ್ಮ ಸ್ವಾರ್ಥಕ್ಕಾಗಿ ಕಚ್ಛಾಟ, ಕೆರಚಾಟ್ಟಗಳನ್ನು ಸೃಷ್ಟಿಸುತ್ತಿದ್ದಾರೆ ಅವರನ್ನೆಲಾ ಪಕಕ್ಕೆ ಸರಿಸಿ ಇಂದು ನಾವು ಸುಂದರವಾದ ಭಾರತವನ್ನು ಕಟ್ಟಬೇಕಾಗಿದೆ ಎಂದ ಅವರು ಸರ್ವೇಜನ ಸುಖಿನೋಭವಂತು ಎಂಬಂತೆ ಇಲ್ಲಿರುವ ಎಲ್ಲ ಧರ್ಮದ ಗ್ರಂಥಗಳು ಹೇಳಿದ್ದು ಶಾಂತಿಪಾಠ ಕಲಿಸಿದೆ ಒಬ್ಬ ಮನುಷ್ಯನನ್ನು ರಕ್ಷಣಿದರೆ ಇಡಿ ಮನುಕುಲವನ್ನೆ ರಕ್ಷಿಸಿದಂತೆ ಎಂಬ ಮಾತನ್ನು ಎಲ್ಲರ ಪಾಲಿಸಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ ಕೋಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಆ ನಿಟ್ಟಿನಲ್ಲಿ ಮಂಗಳೂರಿನ ಸುನ್ನಿ ಸ್ಟೂಡೆಂಟ್ ಫೆಡರೇಷನ ( ಎಸ್ಎಸ್ಎಫ್) ಸಂಘಟನೆ ಮುಂದಾಗಿದ್ದು, ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಹಕಾರ ಮಾಡಲು ಅವರನ್ನು ಪ್ರತ್ಯೇಕವಾಗಿ ಕಂಡು ಬಟ್ಟೆ,ಪಾತ್ರೆ, ಚಾಫೆ ,ಹೊದಿಕೆ ಸೇರಿದಂತೆ ಎಲ್ಲವನ್ನು ನೀಡಲಾಗುತ್ತಿದೆ. ಯಾರು ಸಹ ಆತ್ಮಸ್ಥೈರ್ಯವನ್ನು ಕಳೆದುಕೋಳ್ಳದೆ ಧೈರ್ಯದಿಂದ ಬದುಕಬೇಕೆಂದು ಪ್ರಾಚಾರ್ಯ ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ ಹೇಳಿದರು

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ವಾಯ್. ಹಾದಿಮನಿ ಧ್ವಜಾರೋಹಣ ನೇರವೆರಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಎ.ಎಚ್.ಕೌಜಲಗಿ,ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಪಾಟೀಲ, ಎಸ್.ಕೆ.ಘೊರ್ಪಡೆ,ಸೇರಿದಂತೆ ಇತರರು ಇದ್ದರು . ಇದೇ ಸಂದರ್ಭದಲ್ಲಿ ಎಸ್ಎಸ್ಎಫ್ ವತಿಯಿಂದ ಎಲ್ಲರಿಗೂ ಸಿಹಿ ಹಂಚಿ ಸ್ವತಂತ್ರೋತ್ಸವವನ್ನು ಸರಳವಾಗಿ ಆಚರಿಸಲಾಯಿತು

Related posts: