RNI NO. KARKAN/2006/27779|Saturday, June 15, 2024
You are here: Home » breaking news » ಗೋಕಾಕ:ಅಂಕಲಗಿ ಪಟ್ಟಣದಲ್ಲಿ ಮತದಾರರಿಗೆ ಹಣ ಆಮಿಷ ಒಡ್ಡಿರುವ ಬಗ್ಗೆ ನಮ್ಮಲ್ಲಿ ವಿಡಿಯೋಗಳಿವೆ : ಶಶಿಧರ ದೇಮಶೆಟ್ಟಿ

ಗೋಕಾಕ:ಅಂಕಲಗಿ ಪಟ್ಟಣದಲ್ಲಿ ಮತದಾರರಿಗೆ ಹಣ ಆಮಿಷ ಒಡ್ಡಿರುವ ಬಗ್ಗೆ ನಮ್ಮಲ್ಲಿ ವಿಡಿಯೋಗಳಿವೆ : ಶಶಿಧರ ದೇಮಶೆಟ್ಟಿ 

ಅಂಕಲಗಿ ಪಟ್ಟಣದಲ್ಲಿ ಮತದಾರರಿಗೆ ಹಣ ಆಮಿಷ ಒಡ್ಡಿರುವ ಬಗ್ಗೆ ನಮ್ಮಲ್ಲಿ ವಿಡಿಯೋಗಳಿವೆ : ಶಶಿಧರ ದೇಮಶೆಟ್ಟಿ

ಗೋಕಾಕ ಮೇ 5 : ಕೋತ್ವಾಲ್ ರಾಮಚಂದ್ರ ಶಿಷ್ಯ ಡಿಕೆಶಿ, ಡಿಕೆಶಿ ಶಿಷ್ಯ ಡಾ.ಮಹಾಂತೇಶ ಕಡಾಡಿ ಇವರಿಂದ ಗುಂಡಾಗಿರಿ ನೀರಿಕ್ಷಿಸಲು ಸಾಧ್ಯ ಬಿಜೆಪಿ ಕಾರ್ಯಕರ್ತರಿಂದ ಅಲ್ಲ. ಶನಿವಾರದಂದು ಅಂಕಲಗಿ ಪಟ್ಟಣದಲ್ಲಿ ಮತದಾರರಿಗೆ ಹಣ ಆಮಿಷ ಒಡ್ಡಿರುವ ಬಗ್ಗೆ ನಮ್ಮಲ್ಲಿ ವಿಡಿಯೋಗಳಿವೆ ಕಾಂಗ್ರೇಸ್‍ನವರಂತೆ ಕಟ್ ಮಾಡಿ ಪೇಸ್ಟ್ ಮಾಡಲು ನಮಗೆ ಬರುವದಿಲ್ಲ ಎಂದು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟ ಸಂಚಾಲಕ ಶಶಿಧರ ದೇಮಶೆಟ್ಟಿ ಹೇಳಿದರು.
ರವಿವಾರದಂದು ನಗರದ ಹೊರವಲಯದ ಖೋಜಾ ಫಾರ್ಮಹೌಸನಲ್ಲಿ ಪತ್ರಿಕಾಗೊಷ್ಠಿಯನ್ನು ನಡೆಸಿ ಮಾತನಾಡಿ, ಡಾ.ಮಹಾಂತೇಶ ಕಡಾಡಿ ಅವರಿಗೆ ಪಕ್ಷ ಸಂಘಟನೆಯ ಬಗ್ಗೆ ಅರಿವಿಲ್ಲ. ಗೋಕಾಕ ಮತಕ್ಷೇತ್ರದಲ್ಲಿ ಸೇರಿದಂತೆ ಬೇರೆ ಊರುಗಳಿಂದ ಬಂದಿರುವ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸುಮಾರು 10ಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳಲ್ಲಿ ಲಕ್ಷಾಂತರ ರೂಪಾಯಿ ಹಣ ತಂದು ಅಂಕಲಗಿ ಭಾಗದ ಹಳ್ಳಿಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಯ ಪರ ಹಣ ಹಂಚಿಕೆ ಮಾಡುವಾಗ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಹಾಗೂ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೋಲಿಸರು ಮತ್ತು ಚುನಾವಣಾ ಅಧಿಕಾರಿಗಳು ಪ್ರಭಾವಿ ಸಚಿವೆಯ ಒತ್ತಡಕ್ಕೆ ಮಣಿದು ತಡವಾಗಿ ಬಂದು ಕಾರಗಳಲ್ಲಿದ್ದ ಲಕ್ಷಂತಾರ ರೂಪಾಯಿ ಪಾರು ಮಾಡಲು ಸಹಕರಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಹಾತಶರಾಗಿರುವ ಡಾ.ಮಹಾಂತೇಶ ಕಡಾಡಿ ಹಾಗೂ ಕಾಂಗ್ರೆಸ್ ನಾಯಕರು ಜನರಿಗೆ ಹಣದ ಆಮಿಷ ಒಡ್ಡಿದ್ದಾರೆ. ಡಾ.ಕಡಾಡಿ ಓರ್ವ ವೈದ್ಯ ಇವರು ಕ್ಷೇತ್ರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅಂಕಲಗಿ ಪಟ್ಟಣದಲ್ಲಿ ತಮ್ಮ ಅಭ್ಯರ್ಥಿಯ ಪರ ಹಣ ಹಂಚಿಕೆ ಮಾಡಿರುವದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದ ಅವರು ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ನಾಯಕರು ಹಣ ಹಾಗೂ ಕಾಂಗ್ರೇಸ್ ಬಿತ್ತಿಪತ್ರಗಳನ್ನು ಹಿಡಿದು ನಿಂತಿರುವದನ್ನು ಕಂಡು ಪ್ರಶ್ನಿಸಿ ಪೋಲಿಸ ಠಾಣೆಗೆ ಒಪ್ಪಿಸಿದ್ದಾರೆ. ಆ ಸಮಯದಲ್ಲಿ ಡಾ.ಮಹಾಂತೇಶ ಕಡಾಡಿ ಮನೆಗಳ ಸಂದಿಯಲ್ಲಿ ಓಡಿಹೋಗಿ ಪರಾರಿಯಾಗಿದ್ದರು. ಅಲ್ಲದೇ ಪ್ರಶ್ನಿಸಿದ ದಲಿತ ಸಮುದಾಯದವನನ್ನು ನಿಮ್ಮದು ಬಹಳ ಆಗಿದೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದಿರಿ ಎಂದು ಅವಾಚ್ಯ ಶಬ್ದಗಳಿಂದ ಡಾ.ಕಡಾಡಿ ಹಾಗೂ ಸಂಗಡಿಗರು ನಿಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲು ಹೋದ ದಲಿತ ವ್ಯಕ್ತಿಯ ಕೇಸನ್ನು ಪೋಲಿಸರು ತಗೆದುಕೊಳ್ಳದಂತೆ ಒತ್ತಡಹೇರಲಾಗಿತ್ತು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಲಾಠಿಚಾರ್ಜ ಮಾಡಲು ಬಂದರು. ಇದು ಭ್ರಷ್ಟ ಕಾಂಗ್ರೇಸ್ ಸರಕಾರಕ್ಕೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದರು.
ಅಂಕಲಗಿ ಪೋಲಿಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಪ್ರಕರಣದಲ್ಲಿ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ, ಮಹಾಂತೇಶ ಕಡಾಡಿ, ನಿಂಗಪ್ಪ ಪಟ್ಟಣಶೆಟ್ಟಿ ವಿರುದ್ಧ ಪ್ರಕರಣದಾಖಲಿಸಲಾಗಿದೆ. ನಿಂಗಪ್ಪ ಪಟ್ಟಣಶೆಟ್ಟಿ ಟ್ರಾಕ್ಟರ್ ಮಾರಿ ಹಣ ತಂದಿದ್ದರೆ ಮಲಗುವ ಬೆಡ್ ಕೆಳಗೆ 76ಸಾವಿರ ಮತ್ತು ಪ್ಲಾಸ್ಟೀಕ್ ಕ್ಯಾರಿಬ್ಯಾಗನಲ್ಲಿ 1ಲಕ್ಷ ಹಾಗೂ 500ಕ್ಕೂ ಹೆಚ್ಚು ಕಾಂಗ್ರೆಸ್ ಬಿತ್ತಿಪತ್ರಗಳು ಸೀಗುತ್ತಿರಲಿಲ್ಲ. ಪಿರ್ಯಾದಿದಾರ ಆನಂದ ಕಿಲ್ಯಾಗೋಳ ಅವರಿಗೆ ಜಾತಿ ವಿರುದ್ಧ ಅವಾಚ್ಯಶಬ್ದಗಳಲ್ಲಿ ನಿಂಧಿಸಿದ್ದ ಹಿನ್ನಲೆ ಮಹಾಂತೇಶ ಕಡಾಡಿ, ಸತೀಶ ಪೂಜೇರಿ, ಚಂದನ ಗಿಡ್ಡನವರ, ಕೀರ್ತಿ ಭದ್ರಾವತಿ, ರಾಜು ಉಪ್ಪಾರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಂಗಪ್ಪ ಪಟ್ಟಣಶೆಟ್ಟಿ ಮನೆಯ ಒಳಗೆ ನಾವು ಹೋಗಿಲ್ಲ. ಚುನಾವಣಾ ಅಧಿಕಾರಿಗಳು ಪೋಲಿಸರು ಶೋಧ ಕಾರ್ಯ ನಡೆಸಿದ್ದಾರೆ. ವಿಡಿಯೋ ಒಂದರಲ್ಲಿ 500ರೂಪಾಯಿಯ 10ಕ್ಕೂ ಹೆಚ್ಚು ಬಂಡಲ್‍ಗಳು ಕಾಣಿಸಿದ್ದು ಚುನಾವಣಾ ಅಧಿಕಾರಿಗಳು ಪೋಲಿಸರು ಹೆಚ್ಚಿನ ಹಣ ಇದ್ದರು 1.76ಲಕ್ಷ ಅಷ್ಟೇ ಹಣವನ್ನು ಏಕೆ ಪ್ರಕರಣದಲ್ಲಿ ತೋರಿಸಿದ್ದಾರೆ ತಿಳಿದು ಬಂದಿಲ್ಲ. ಈ ಕೂಡಲೇ ಡಾ.ಮಹಾಂತೇಶ ಕಡಾಡಿ ಹಾಗೂ ಸಂಗಡಿಗಳರನ್ನು ಕೂಡಲೇ ಬಂಧಿಸಬೇಕು ಇಲ್ಲವಾದಲ್ಲಿ ಬಿಜೆಪಿ ಕಾರ್ಯಕರ್ತರು ಪೋಲಿಸ್ ಠಾಣೆಯ ಎದುರು ಪ್ರತಿಭಟಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮಣ್ಣವರ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾದ್ಯಕ್ಷ ಶಹನವಾಜ ಧಾರವಾಡಕರ, ಬೆಳಗಾವಿ ಮಹಾನಗರ ಚುನಾವಣೆ ರಮೇಶ ದೇಶಪಾಂಡೆ, ಲಕ್ಕಪ್ಪ ತಹಶೀಲದಾರ, ಆನಂದ ಅತ್ತುಗೋಳ, ಸುರೇಶ ಪತ್ತಾರ ಇದ್ದರು.

Related posts: