ಗೋಕಾಕ:ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ

ಗೋಕಾಕದಲ್ಲಿ ಮಹಾವೀರ ಜಯಂತಿ ಅದ್ಧೂರಿ ಆಚರಣೆ
ಗೋಕಾಕ ಏ 11 : ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿಯನ್ನು ಜೈನ ಸಮುದಾಯದವರು ಗುರುವಾರ ಅದ್ದೂರಿಯಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ನಡೆದ ಬೃಹತ್ ಮೆರವಣಿಗೆಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನಗರಸಭೆ ಸದಸ್ಯ ಬಾಬು ಮುಳಗುಂದ, ದಿಗಂಬರ ಜೈನ್ ಸಮಾಜದ ಅಧ್ಯಕ್ಷರಾದ ಶೀಥಲ ಡೊಂಗರೆ, ಮುಖಂಡರುಗಳಾದ ಧಶರಥ ಪರಪ್ಪನವರ, ಧನ್ಯಕುಮಾರ ಕಿತ್ತೂರ, ಮಹಾವೀರ ಖಾರೆಪಠಾಣ, ಮಹಾವೀರ ಜೋಡಟ್ಟಿ, ಸಂತೋಷ ಶಿರಗುಪ್ಪಿ, ರಾಜು ಧರಗಶೆಟ್ಟಿ, ಸಂತೋಷ ಹುಂಡೆಕರ, ದೀಪಕ ಕೋಟಬಾಗಿ,ಮಹಿಳಾ ಮಂಡಳ ಅಧ್ಯಕ್ಷೆ ಸಾವಿತ್ರಿ ದರಗಶೆಟ್ಟಿ,ಚಂದಾ ಸೋಲ್ಹಾಪುರೆ, ಲೀಲಾ ಖಾರೆಪಠಾಣ,ಸುನೀತಾ ಜೋಡಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.