ಗೋಕಾಕ:ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ.ಎಚ್.ಸ್ವಾಮಿ

ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ.ಎಚ್.ಸ್ವಾಮಿ
ಗೋಕಾಕ ಸೆ 30 : ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ. ಅದನ್ನು ಮನಗಂಡು ಜ್ಞಾನವನ್ನು ಸಂಪಾದಿಸಿಕೊಂಡು ತಮ್ಮ ಗುರಿ ಮುಟ್ಟಬೇಕು ಎಂದು ಪ್ರಾಚಾರ್ಯ ಬಿ.ಎಚ್.ಸ್ವಾಮಿ ಹೇಳಿದರು.
ಶನಿವಾರದಂದು ನಗರದ ಸತೀಶ ಶುರ್ಗಸ್ ಅಕ್ಯಾಡಮಿಯಲ್ಲಿ ಸತೀಶ ಶುರ್ಗಸ್ ಅಕ್ಯಾಡಮಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕ್ರೀಡಾ ಮತ್ತು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನಶೀಲರಾಗಬೇಕು. ಸಾಮಾಜಿಕ ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು. ಸರ್ಕಾರದ ಮೇಲೆ ಅವಲಂಬಿತವಾಗದೆ ಸರ್ಕಾರದ ಒಂದು ಅಂಗವಾಗಿ ತಾವೂ ಕಾರ್ಯ ನಿರ್ವಹಿಸಬೇಕು ವಿದ್ಯಾರ್ಥಿಗಳು ತಮ್ಮನ್ನು ಗುರುತಿಸಿಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಗುರಿ ಅಚಲವಾಗಿರಬೇಕು. ತಾವು ಅಂಕಗಳ ಹಿಂದೆ ಹೋಗದೆ ಸಾಮಾಜಿಕ ಜ್ಞಾನ ಬೆಳೆಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿ.ಆರ್.ಲಕ್ಷಟ್ಟಿ, ಸಂಜೀವ ಭಜಂತ್ರಿ, ಗೀತಾ ಗೂಡದಡ್ಡಿ, ವೈಶಾಲಿ ಪಾಟೀಲ, ಆರ್.ಸಿ.ಹಿರೇಮಠ, ಪಿ.ಜಿ.ತಿಗಡಿ, ಸಂತೋಷ ಸನನಾಯಿಕ, ಎಸ್ ಎಲ್ ಮನ್ನಿಕೇರಿ, ಸಿ.ಜಿ.ಗಣಾಚಾರಿ, ಡಾ.ಐ.ಎಂ.ನಧಾಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.