ಗೋಕಾಕ:ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಂದ ಸಚಿವರಿಗೆ ಸನ್ಮಾನ
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಂದ ಸಚಿವರಿಗೆ ಸನ್ಮಾನ
ಘಟಪ್ರಭಾ ಡಿ 9 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಗೆ ಅಧ್ಯಕ್ಷೆಯಾಗಿ ಸುಜಾತಾ ಸುರೇಶ ಪೂಜೇರಿ ಹಾಗೂ ಉಪಾಧ್ಯಕ್ಷೆಯಾಗಿ ಕಸ್ತೂರಿ ಕೆಂಪಣ್ಣ ಚೌಕಶಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಲು ಮಾರ್ಗದರ್ಶನ ನೀಡಿದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರ ಬೇಟ್ಟಿಯಾಗಿ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಹಿರಿಯರಾದ ಕಾಂತು ಯತ್ತಿನಮನಿ, ಮುಖಂಡರಾದ ಡಿ.ಎಂ.ದಳವಾಯಿ, ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ, ಉಪಾಧ್ಯಕ್ಷೆ ಕಸ್ತೂರಿ ಚೌಕಶಿ, ಪಂ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ರಾಮಪ್ಪ ನಾಯಿಕ, ಇಮ್ರಾನ ಬಟಕುರ್ಕಿ, ಸುರೇಶ ಪೋಜೇರಿ, ಕೆಂಪ್ಪಣ್ಣಾ ಚೌಕಶಿ, ಅಲ್ತಾಪ ಉಸ್ತಾದ, ಇಕಬಾಲ ಮೊಕಾಶಿ, ಸೇರಿದಂತೆ ಅನೇಕರು ಇದ್ದರು.