ಗೋಕಾಕ:ಆಷಾಢ ಮಾಸದ ಪ್ರಯುಕ್ತ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಶ್ರೀ ಭಗೀರಥರ ಕುರಿತು ಪ್ರವಚನ ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ

ಆಷಾಢ ಮಾಸದ ಪ್ರಯುಕ್ತ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಶ್ರೀ ಭಗೀರಥರ ಕುರಿತು ಪ್ರವಚನ ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ
ಗೋಕಾಕ ಜೂ 24 : ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದರಿಂದ ದೇವರ ಅನುಗ್ರಹದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಸ್ವಾಸ ವೃದ್ಧಿಸುತ್ತದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಮಂಗಳವಾರದಂದು ಇಲ್ಲಿಯ ಉಪ್ಪಾರ ಗಲ್ಲಿಯಲ್ಲಿ ಶ್ರೀ ಕಪರಟ್ಟಿ ಕಳ್ಳಿಗುದ್ದಿಯ ಬಸವರಾಜ ಸ್ವಾಮಿಗಳು ಹಮ್ಮಿಕೊಂಡ ಆಷಾಢ ಮಾಸದ ಶ್ರೀ ಭಗೀರಥರ ಕುರಿತು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶ್ರೀ ಭಗೀರಥ ಮಹಾರಾಜರು ಸತತ ಪ್ರಯತ್ನದಿಂದ ಗಂಗೆಯನ್ನೆ ಭೂಮಿಗಿಳಿಸಿದ ಮಹಾತ್ಮರು. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು. ಅವರ ಆದರ್ಶಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಢಿಸಿಕೊಂಡು ಆಚರಣೆಗೆ ತರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ಮುತ್ತೇಪ್ಪ ಕುಳ್ಳೂರ, ಭಗೀರಥ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೆನ್ನವರ, ಮುಖಂಡರುಗಳಾದ ಎಸ್ ಎಮ್ ಹತ್ತಿಕಟಗಿ, ಅಶೋಕ ಗೋಣಿ, ಪರಸಪ್ಪ ಬಬಲಿ, ಯಲ್ಲಪ್ಪ ಹೆಜ್ಜೆಗಾರ, ಮಾಯಪ್ಪ ತಹಶೀಲದಾರ, ಕುತ್ಬುದ್ದಿನ ಗೋಕಾಕ ಸೇರಿದಂತೆ ಅನೇಕರು ಇದ್ದರು.