RNI NO. KARKAN/2006/27779|Sunday, September 24, 2023
You are here: Home » breaking news » ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಬೆಳಗಾವಿ:ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ 

ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿದ್ದರು : ಸಚಿವ ರಮೇಶ

ಬೆಳಗಾವಿ ನ 6 : ಸಂತ ಕನಕದಾಸರು ಶ್ರೇಷ್ಠ ದೈವಭಕ್ತರಾಗಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ತಮ್ಮ ಭಕ್ತಿ ಪರಾಕಾಷ್ಠೆ ಮೂಲಕ ಒಲಿಸಿಕೊಂಡವರು ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಅವರು ಸೋಮವಾರದಂದು ಸಂತಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರಿಗೆ ಪೂಜೆ ಸಲ್ಲಿಸಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು

ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕ ಅಧ್ಯಯನ ಪೀಠವನ್ನು ಸರಕಾರ ಸ್ಥಾಪಿಸಿದೆ ಕರ್ನಾಟಕ ಕಂಡ ಇಬ್ಬರು ದಾಸಶ್ರೇಷ್ಠರ ಪೈಕಿ ಕನಕದಾಸರು ಹಾಗೂ ಪುರಂದರದಾಸರು. ಇಬ್ಬರೂ ದಾಸಶ್ರೇಷ್ಠರು ಜಾತಿ, ಧರ್ಮ, ಕುಲಗಳ ಆಚೆ ಸಂಕೀರ್ಣತೆಯ ಅನಿಷ್ಟಗಳನ್ನು ತೆಗಳಿ, ಸ್ವಭಾವಶ್ರೇಷ್ಠತೆಯನ್ನು ಹಾಡಿ ಹೊಗಳಿದ್ದಾರೆ ಎಂದು ಸಚಿವರು ಬಣ್ಣಿಸಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ ಕನಕದಾಸರು ಮತ್ತು ಪುರಂದರದಾಸರ ಪದಗಳು ಸರಳ ಭಾಷೆಯಲ್ಲಿ ದೈವಭಕ್ತಿಯನ್ನು ಅನಾವರಣಗೊಳಿಸಿದರೆ, ಕನಕದಾಸರ ಪದಗಳು ಸಾಹಿತ್ಯ, ಕಲಾತ್ಮಕ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ಇಬ್ಬರೂ ಕೃಷ್ಣನ ಶ್ರೇಷ್ಠ ಭಕ್ತರು. ಕನಕದಾಸರ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ” ಮತ್ತು “ಕುಲ,ಕುಲ, ಕುಲವೆಂದು ಹೊಡರದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂಬ ಹಾಡುಗಳು ಮನಮುಟ್ಟುತ್ತವೆ ಎಂದರು.

ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಜಿಪಂ.ಸಿಇಓ ಆರ್. ರಾಮಚಂದ್ರನ್, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಮೇಯರ್ ಸಂಜೋತಾ ಬಾಂದೇಕರ, ಅಧಿಕಾರಿಗಳು ಹಾಗೂ ಹಾಲುಮತದ ಹಿರಿಯರು ಭಾಗವಹಿಸಿದ್ದರು.

Related posts: