RNI NO. KARKAN/2006/27779|Saturday, May 18, 2024
You are here: Home » breaking news » ಗೋಕಾಕ:ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ : ಶಾಸಕ ಸತೀಶ ಆರೋಪ

ಗೋಕಾಕ:ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ : ಶಾಸಕ ಸತೀಶ ಆರೋಪ 

ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ : ಶಾಸಕ ಸತೀಶ ಆರೋಪ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 9 :

 

 

ನೆರೆಯಿಂದ ಸಾವಿರಾರು ಜನರು ಸಂತ್ರಸ್ತರಾದಾಗ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಂದ ನೆರವು ಸಮರೋಪಾದಿಯಲ್ಲಿ ಹರಿದು ಬಂದರೂ ಇಲ್ಲಿಯ ಶಾಸಕರು ಮಾತ್ರ ಮುಂಬೈಯಲ್ಲಿ ಅಧಿಕಾರಕ್ಕಾಗಿ ಠಿಕಾಣಿ ಹೂಡಿದ್ದನ್ನು ಜನತೆ ಎಂದೂ ಮರೆಯಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಸಂಜೆ ನಗರದ ಹಾಳಬಾಗ ಗಲ್ಲಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ಹಿನ್ನಲೆಯಲ್ಲಿ ಸ್ಥಳೀಯರು ಆಯೋಜಿಸಿದ್ದ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪ್ರವಾಹ ಇಳಿದ ನಂತರ ನಗರ ಸ್ವಚ್ಚತೆಯಿಂದ ಜನರಿಗೆ ಅನುಕೂಲದೊಂದಿಗೆ ಮುಂದಾಗುವ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಗಮನಿಸಿ ನಾವು ಸ್ವಚ್ಛತ್ತಾ ಕಾರ್ಯವನ್ನು ಮಾಡಿದ್ದೇವೆ. ಅದನ್ನು ಮಾಡಬೇಕಾದವರು ನೋಡುತ್ತಾ, ಭಾಷಣಕ್ಕೆ ಸೀಮಿತಿಗೊಳಿಸಿ ನಿಮ್ಮ ದು:ಖವನ್ನು ಕೇಳಲಿಲ್ಲ. 22 ವರ್ಷಗಳಿಂದಲೂ ಅವರ ದರ್ಶನ ನಿಮಗೆ ಕಡಿಮೆ. ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ. ಜನತೆ ಜಾಗೃತರಾಗಿ ಬದಲಾವಣೆಗೆ ಮುಂದಾಗುವಂತೆ ಕೋರಿದರು.
ನಾವು ನಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂ.ಗಳ ವೆಚ್ಚದಲ್ಲಿ ಗೋಕಾಕ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೊಳಿಸಿದರೆ ಇಲ್ಲಿಯ ನಗರಸಭೆಯವರು ನೆರೆಯಿಂದ ಬಂದು ಬಿದ್ದ ಮಣ್ಣನ್ನು ತೆಗೆಯಲು 80 ಲಕ್ಷ ರೂ. ಖರ್ಚನ್ನು ಹಾಕಿದ್ದಾರೆ. ಈ ಕುರಿತು ನಗರಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಟ್ರೀಪ್ ಟ್ಯಾಕ್ಟರ್‍ಗೆ 400 ರೂ.ಗಳ ಬದಲಾಗಿ 1200 ರೂ.ಗಳ ಖರ್ಚು ತೋರಿಸಿ ಲಕ್ಷಾಂತರ ರೂ.ಗಳನ್ನು ಅಂಬಿರಾವ ಪಾಟೀಲ ಹಾಗೂ ಎಸ್.ಎ.ಕೊತವಾಲ ಅವರು ತಮ್ಮ ಜೇಬಿಗೆ ಇಳಿಸಿದ್ದಾರೆಂದು ನೇರವಾಗಿ ಪ್ರತಿಕ್ರಿಯಿಸಿದರು.
ನಿಮ್ಮಿಂದಲೇ ನಾನು ರಾಜಕೀಯವಾಗಿ ಮೇಲೆ ಬಂದಿದ್ದೇನೆ. ನಿಮ್ಮ ಸಮಸ್ಯೆಗೆ ನಮ್ಮ ಸ್ಪಂದನೆ ಸದಾ ಇದ್ದು, ಸಂತ್ರಸ್ತರಲ್ಲಿ ಬಡವರಿಗೆ ಮನೆ ನಿರ್ಮಿಸಲು ಕಡಿಮೆ ಬೆಲೆಯಲ್ಲಿ ಮರಳನ್ನು ನೀಡಲಾಗುವುದು. ನಿವೇಶನವಿಲ್ಲದವರಿಗೆ ನಾನು ಹಾಗೂ ಸಹೋದರ ಲಖನ್ ಕೂಡಿಕೊಂಡು ಖಂಡಿತವಾಗಿಯೂ ನಿವೇಶನ ಕೊಡಿಸುವುದಾಗಿ ಭರವಸೆಯನ್ನು ನೀಡಿದರು.
ಜನರಿಂದ ನಾವು ಶಾಸಕರು ಆಗಿದ್ದೇವೆ, ಹಣದಿಂದ ಅಲ್ಲ. ನೋಟುಗಳಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡದೆ ಜನಪರ ಕಾಳಜಿಯನ್ನು ಹೊಂದಿರುವವರಿಗೆ ತಮ್ಮ ಮತವನ್ನು ನೀಡಬೇಕು. ಈಗ ಬದಲಾವಣೆಯ ಸಮಯ ಬಂದಿದೆ. ತಾವು ಜಾಗೃತರಾಗಿ ಬದಲಾವಣೆ ತರುವುದರೊಂದಿಗೆ ನೆಮ್ಮದಿಯ ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು.
ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಯಡಿಯೂರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರ ಬಣ್ಣದ ಮಾತಿಗೆ ಹಾಗೂ ಅವರ ಕಣ್ಣೀರಿಗೆ ಮರುಳಾದರೇ ತಾವು ಮುಂದಿನ 5 ವರ್ಷಗಳ ಕಾಲ ಅಳಬೇಕಾಗುತ್ತದೆ. ನಿಮ್ಮೆಲ್ಲರ ಪುಣ್ಯದಿಂದ ಉಪಚುನಾವಣೆ ಬಂದಿದ್ದು ನೀವು ಬದಲಾವಣೆಗೆ ಸಿದ್ದರಾಗಬೇಕು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತಿಳಿಸಿದರು.
ಯುವ ಮುಖಂಡ ಲಖನ ಜಾರಕಿಹೊಳಿ ಮಾತನಾಡಿ ಕೆಲವು ಸ್ವಾರ್ಥಿಗಳ ದುರಾಡಳಿತದಿಂದ ಕ್ಷೇತ್ರದ ಲಕ್ಷಾಂತರ ಜನ ಅಭಿವೃದ್ದಿಯಿಂದ ವಂಚಿತರಾಗಿ ಕ್ಷೇತ್ರದ ಅಭಿವೃದ್ದಿಯಲ್ಲಿ ಹಿನ್ನಡೆಯಾಗುತ್ತಿದೆ. ಜನೋಪಕಾರಿಗಳೆಂದು ಖಾಲಿ ಕೈಯಿಂದ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ. ಇಲ್ಲಿಯ ರಾವಣ ರಾಜ್ಯವನ್ನು ಅಂತ್ಯ ಮಾಡಿ ಹೊಸದಾಗಿ ರಾಮರಾಜ್ಯವನ್ನು ಕಟ್ಟಲು ತಮ್ಮ ಬೆಂಬಲ ಅಗತ್ಯವೆಂದು ಜನತೆಯಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸತೀಶ ಹಾಗೂ ಲಖನ್ ಅವರನ್ನು ಹಾಳಬಾಗ ಗಲ್ಲಿ ನಾಗರೀಕರು ಸತ್ಕರಿಸಿದರು ನಂತರ ಗೋಕಾಕ ನಗರಸಭೆಯ ಅವ್ಯವಸ್ಥೆಗಳ ಕುರಿತಾದ ಕಥೆಯು ಕೇಳಿರಣ್ಣ ಎಂಬ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಾಯಪ್ಪ ಭಂಡಾರಿ. ಎಸ್.ಎನ್.ಮಕಾನದಾರ, ಶಿವು ಪಾಟೀಲ, ರಿಯಾಜ ಚೌಗಲಾ, ಶಿವು ಪೂಜೇರಿ, ಮುನ್ನಾ ಖತೀಬ, ಆರೀಪ ಪೀರಜಾದೆ ಸೇರಿದಂತೆ ಅನೇಕರು ಇದ್ದರು.

ಸತೀಶ ಜಾರಕಿಹೊಳಿ ಶಾಸಕರು ಯಮಕನಮರಡಿ : ಬೆಳಗಾವಿ ನಂತರ ಗೋಕಾಕ ಪಟ್ಟಣ ಅಭಿವೃದ್ದಿ ಪಥದತ್ತ ಸಾಗಬೇಕಾಗಿತ್ತು. ಆದರೆ ಶತಮಾನಗಳ ಇತಿಹಾಸ ಹೊಂದಿದ್ದ ಇಲ್ಲಿಯ ಫಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ 7 ನೂರಕ್ಕೆ ಇಳಿದಿದ್ದು, ಇದಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರೇ ಕಾರಣ. ರಿದ್ದಿ-ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಅಲ್ಲದೆ ಇದರಿಂದ ಯಾವುದೇ ಹೊಸ ಕಾರ್ಖಾನೆಗಳು ಗೋಕಾಕದಲ್ಲಿ ಪ್ರಾರಂಭ ಮಾಡಲು ಉದ್ಯೋಗಪತಿಗಳು ಮುಂದೆ ಬರುತ್ತಿಲ್ಲ.

Related posts: