RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮಕ್ಕಳಲ್ಲಿ ಶಿಕ್ಷಣದೊಂದಿಗೆ ಭಾವೈಕ್ಯತೆ ಹಾಗೂ ದೇಶಾಭಿಮಾನವನ್ನು ಬೆಳೆಸಿ : ಮಹಾಲಿಂಗ ಮಂಗಿ

ಗೋಕಾಕ:ಮಕ್ಕಳಲ್ಲಿ ಶಿಕ್ಷಣದೊಂದಿಗೆ ಭಾವೈಕ್ಯತೆ ಹಾಗೂ ದೇಶಾಭಿಮಾನವನ್ನು ಬೆಳೆಸಿ : ಮಹಾಲಿಂಗ ಮಂಗಿ 

ಮಕ್ಕಳಲ್ಲಿ ಶಿಕ್ಷಣದೊಂದಿಗೆ ಭಾವೈಕ್ಯತೆ ಹಾಗೂ ದೇಶಾಭಿಮಾನವನ್ನು ಬೆಳೆಸಿ : ಮಹಾಲಿಂಗ ಮಂಗಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 28 :

 

 

ವಿವಿಧತೆಯಲ್ಲಿ ಏಕತೆ ಕಾಣುವದು ಭಾರತ ದೇಶದ ವೈಶಿಪ್ಟ್ಯವಾಗಿದ್ದು ,ಮಕ್ಕಳಲ್ಲಿ ಶಿಕ್ಷಣದೊಂದಿಗೆ ಭಾವೈಕ್ಯತೆ ಹಾಗೂ ದೇಶಾಭಿಮಾನವನ್ನು ಬೆಳೆಸುವಂತೆ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು

ಸೋಮವಾರದಂದು ಅಂಬೇಡ್ಕರ್ ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು .
ಇಂದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕ ಹಾಗೂ ಶಿಕ್ಷಕರ ಮೇಲಿದ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವದರೊಂದಿಗೆ ಭವ್ಯ ಭಾರತ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ ಕ್ಷೇತ್ರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವ ಉದ್ದೇಶದಿಂದ ಶಾಸಕರಾದ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಗೋಕಾಕ ತಾಲೂಕ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಹೇಳಿದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಈ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಾಹೆಜಬೀನ ಮುಲ್ಲಾ ಅವರಿಗೆ ಬೇಸ್ಟ ಸ್ಟುಡಂಟ ಆಫ್ ದಿ ಈಯರ್ ಟ್ರೋಫಿ ನೀಡಿ ಗೌರವಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

ಈ ಸಂದರ್ಭದಲ್ಲಿ ಗಣ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪಶಾಸ್ತ್ರಿ ಗೋಲ್ಲರ , ಬಸವರಾಜ ಖಾನಪ್ಪನವರ , ಮುಸ್ತಾಕ ಖಂಡಾಯತ, ಶಿಕ್ಷಣ ಇಲಾಖೆಯ ಎಂ.ಬಿ ಪಾಟೀಲ, ಜಿ. ಆರ್ ಮಾಳಗಿ, ಎಸ್.ಆರ್.ಪಾಟೀಲ, ಜಮಖಂಡಿ , ಎಂ.ಬಿ. ಮೋಮಿನ , ಎಸ್.ಡಿ.ಎಂ.ಸಿ ಯ ಡಾ.ಎನ್.ಜಿ ಜಮಾದಾರ ,ಅಬ್ಬಾಸ್ ದೇಸಾಯಿ, ಸಾದಿಕ ಹಲ್ಯಾಳ, ಖ್ವಾಜಾಸಾಬ ಮತ್ತೆ , ಯಾಕೂಬ ಮುಜಾವರ , ಅಷ್ಪಾಕ ಅತ್ತಾರ ,ಮುಖ್ಯೋಪಾಧ್ಯಾಯ ಬಿ.ಆರ್.ಮುರಗೋಡ ಹಾಗೂ ಶಿಕ್ಷಕರು ಸೇರಿದಂತೆ ಅನೇಕರು ಇದ್ದರು .

Related posts: