RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಸಿಎಂ ಭೇಟಿ :ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ

ಬೆಳಗಾವಿ:ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಸಿಎಂ ಭೇಟಿ :ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ 

ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ಸಿಎಂ ಭೇಟಿ :ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ

ಬೆಳಗಾವಿ ನ 4: ಬೆಳಗಾವಿ ರಾಜ್ಯೋತ್ಸವದಂದು ಎಂಇಎಸ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಮೇಯರ್,ಸೇರಿದಂತೆ ಇತರ ಎಂಈಎಸ್ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಲು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗುವದಾಗಿ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಮಾದ್ಯಮಗಳ ಜೊತೆ ಮಾತನಾಡಿ ಎಂಇಎಸ ವಿರುದ್ಧ ಕಿಡಿಕಾರಿದರು

ನಾಡದ್ರೋಹಿಗಳು ವಿರುದ್ಧ ಕ್ರಿಮಿನಲ್ ಕೇಸ ದಾಖಲಿಸಿ, ಕ್ರಮಕೈಗೊಳ್ಳಬೇಕು. ಕರಾಳ ದಿನ್ನದಲ್ಲಿ ಪಾಲ್ಗೊಂಡ ಮೇಯರ್, ಪಾಲಿಕೆ ಸದಸ್ಯರ ವಿರುದ್ಧ ಕ್ರಮವಾಗಬೇಕು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಒತ್ತಾಯಿಸುವೆ ಎಂದು ಹೇಳಿದರು

ಸ್ಥಳೀಯ ರಾಜಕೀಯ ಲಾಭಕ್ಕಾಗಿ ಜನಪ್ರತಿನಿಧಿಗಳು ಕನ್ನಡ ಬಲಿಕೊಡುತ್ತಿದ್ದಾರೆ ಹೀಗಾಗಿ ಪಾಲಿಕೆಯಲ್ಲಿ ಕನ್ನಡ ಮೇಯರ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ನಾರಾಯಣ ಗೌಡಾ ಆಕ್ರೋಶ ವ್ಯಕ್ತಪಡಿಸಿದರು

ಬೆಳಗಾವಿಯ ಸ್ಥಳೀಯ ರಾಜಕಾರಣಿಗಳು ಕದ್ದು ಮುಚ್ವಿ ಎಂಈಎಸ್ ಸಂಘಟನೆಯನ್ನು ಬೆಳೆಸುತ್ತಿದ್ದಾರೆ ಕನ್ನಡದ ಮೇಯರ್ ಆಗುವ ಸಾಧ್ಯತೆ ಇದ್ದರೂ ಅವರು ಅದನ್ನು ತಪ್ಪಿಸಿ ತಮ್ಮ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ನಾರಾಯಣಗೌಡ ಆಕ್ರೋಶವ್ಯೆಕ್ತಪಡಿಸಿದರು
ಕನ್ನಡಿಗರಿಗೆ ಶೇ 80 ರಷ್ಟು ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ತ ನ ಪ್ರತಿಭಟನಾ ರ್ಯಾಲಿ ನಡೆಯಲಿದೆ ಕರವೇ ಅಖಂಡ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ನಿರಂತರ ಹೋರಾಟ ಮಾಡುತ್ತಿದೆ ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ಕರವೇ ಹಿಂದೆಯೂ ಹೋರಾಟ ಮಾಡಿದೆ ಮುಂದೆಯೂ ಮಾಡುತ್ತದೆ ಎಂದರು

Related posts: