ಗೋಕಾಕ:ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ

ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ
ಗೋಕಾಕ ಮೆ 1 : ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬುಧವಾರದಂದು ನಗರದ ಕಿಲ್ಲಾ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿತು.
ಮುಂಜಾನೆ 7ಗಂಟೆಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, 8.30ಕ್ಕೆ ದೇವಸ್ಥಾನದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಶ್ರೀಮತಿ ಜಯಾ ಕಮತ ಅವರು ನೆರವೇರಿಸಿದರು. 9ಗಂಟೆಗೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
9.30ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಡಾ.ಉದಯ ಆಜರೆ ಇವರು ಷಟಸ್ಥಲ ಧ್ವಜಾರೋಹನ ಮಾಡಿದರು. 10ಗಂಟೆಗೆ ಬಸವರಾಜ ಹುಳ್ಳೇರ ದಂಪತಿಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು . 11ಗಂಟೆಗೆ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರರ ನಾಮಕರಣ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿದವು ಸಾಯಂಕಾಲ 5ಗಂಟೆಗೆ ಅಜಯ ವಣ್ಣೂರ ದಂಪತಿಗಳಿಂದ ದೇವಸ್ಥಾನದಲ್ಲಿ ಪಲ್ಲಕ್ಕಿ ಪೂಜೆ, ಮಂಜುನಾಥ ಹಿರೇಮಠ ದಂಪತಿಗಳಿಂದ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು ಪಲ್ಲಕ್ಕಿ ಉತ್ಸವನ್ನು ಡಾ.ಮಹಾಂತೇಶ ಕಡಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು, ಪೂಜ್ಯ ಶ್ರೀ ಬಸವಪ್ರಭು ದೇವರು, ಶ್ರೀ ಮಹಾಂತ ದೇವರು, ಅಶೋಕ್ ಪೂಜಾರಿ, ಡಾ.ಮಹಾಂತೇಶ ಕಡಾಡಿ, ಬಸನಗೌಡ ಪಾಟೀಲ, ಚಂದ್ರಶೇಖರ್ ಕೊಣ್ಣೂರ, ಬಸವರಾಜ ಕಲ್ಯಾಣಶೆಟ್ಟಿ, ವಿಶ್ವನಾಥ್ ಕಡಕೋಳ, ಸೋಮಶೇಖರ ಮಗದುಮ್ಮ, ಮಹಾಂತೇಶ ತಾವಂಶಿ, ಅಶೋಕ್ ಹೆಗ್ಗನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
