RNI NO. KARKAN/2006/27779|Friday, August 1, 2025
You are here: Home » breaking news » ಘಟಪ್ರಭಾ:ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ

ಘಟಪ್ರಭಾ:ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ 

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕೆ.ಎಚ್.ಐ ಆಸ್ಪತ್ರೆ ವಿರುದ್ಧ ಸಂಬಂಧಿಕರ ಪ್ರತಿಭಟನೆ

ಘಟಪ್ರಭಾ ಫೆ 7 : ಸ್ಥಳೀಯ ಕರ್ನಾಟಕ ಆರೋಗ್ಯ ಧಾಮದಲ್ಲಿ (ಕೆ.ಎಚ್.ಐ ಆಸ್ಪತ್ರೆ) ದಾಖಲಾಗಿರುವ ರೋಗಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ರೋಗಿಯ ಸಂಬಂದಿಕರು ಹಾಗೂ ಕರವೇ ಕಾರ್ಯಕರ್ತರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಸಾವನ್ನಪ್ಪಿದ ವ್ಯಕ್ತಿ ಧುಪದಾಳ ಗ್ರಾಮದ ಹಣಮಂತ ನಾವಿ (60) ಎಂದು ತಿಳಿದು ಬಂದಿದ್ದು, ಆತನಿಗೆ ಜ್ವರ ಬಂದ ಕಾರಣ ಕಳೆದ ಮೂರು ದಿನದ ಹಿಂದೆ ಕೆಎಚ್‍ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹನಮಂತ ನಾವಿ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮಂಗಳವಾರ ಸಾವನ್ನಪ್ಪಿದ್ದಾನೆ. ಇದಕ್ಕೆ ವೈದ್ಯರ ನಿರ್ಲಕ್ಷವೆ ಕಾರಣವೆಂದು ಆಸ್ಪತ್ರೆ ವಿರುದ್ಧ ಪ್ರತಿಭಟಿಸಲಾಯಿತು.
ನಂತರ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಘನಶ್ಯಾಮ ವೈದ್ಯ, ಮೂಡಲಗಿ ಸಿಪಿಐ, ಘಟಪ್ರಭಾ ಪಿಎಸ್‍ಐ, ಮೂಡಲಗಿ ಪಿಎಸ್‍ಐ ಹಾಗೂ ಧುಪದಾಳ ಗ್ರಾಮದ ಹಿರಿಯರು ರಾಜಿ ಸಂಧಾನ ಹಾಗೂ ಕ್ಷಮೆ ಯಾಚಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಹಿರಿಯರಾದ ಹನಮಂತ ಗಾಡಿವಡ್ಡರ, ಮಹೇಶ ಪಾಟೀಲ, ಮದಾರಸಾಬ ಜಗದಾಳ, ರೇಹಮನ್ ಮೊಕಾಶಿ, ರವಿ ನಾವಿ ಸೇರಿದಂತೆ ಅನೇಕರು ಇದ್ದರು.

Related posts: