ಗೋಕಾಕ:ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ
ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ನಾಳೇ ಖಾಸಗಿ ಆಸ್ವತ್ರೆಗಳ ಸೇವೆ ಸ್ಥಗಿತ : ಡಾ. ಅಶೋಕ ಕೊಪ್ಪ
ಗೋಕಾಕ ನ 2: ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಮಾರಕವಾಗಿರುವ ರಾಜ್ಯ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಕೆ.ಪಿ.ಎಮ್.ಇ. ಕಾನೂನಿಗೆ ತಿದ್ದುಪಡಿಯನ್ನು ವಿರೋಧಿಸಿ ಅದನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ದಿ. 3ರಂದು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತ ಪಡಿಸುತ್ತಿವೆ.
ಗೋಕಾಕ ವೈದ್ಯಕೀಯ ಸಂಘದ ಕರೆಯ ಮೇರೆಗೆ ದಿ. 3 ರಂದು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ದೊರೆಯುವದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸಿ ವೈದ್ಯರಿಗೆ ಮಾರಕವಾಗಿರುವ ಕಾನೂನು ಜಾರಿಗೆ ಬಾರದಂತೆ ಒತ್ತಡ ತರಲು ಸಹಕರಿಸಬೇಕೆಂದು ಗೋಕಾಕ ಐಎಮ್‍ಎ ಅಧ್ಯಕ್ಷ ಡಾ. ಸುರೇಂದ್ರ ಪಾಟೀಲ ಹಾಗೂ ಕಾರ್ಯದರ್ಶಿ ಡಾ. ಅಶೋಕ ಕೊಪ್ಪ ಮನವಿ ಮಾಡಿಕೊಂಡಿದ್ದಾರೆ.