ಗೋಕಾಕ:ನಗರದ ಪ್ರಮುಖ ಬೀದಿಗಳಲ್ಲಿ ಅಗ್ನಿಶಾಮಕ ದಳ ಹಾಗೂ ನಗರಸಭೆ ವತಿಯಿಂದ ಸಾನಿಟೈಜರ ಸಿಂಪಡನೆ
ನಗರದ ಪ್ರಮುಖ ಬೀದಿಗಳಲ್ಲಿ ಅಗ್ನಿಶಾಮಕ ದಳ ಹಾಗೂ ನಗರಸಭೆ ವತಿಯಿಂದ ಸಾನಿಟೈಜರ ಸಿಂಪಡನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 27 :
ನಗರಸಭೆ ಹಾಗೂ ಅಗ್ನಿ ಶಾಮಕದಳ ವತಿಯಿಂದ ನಗರದ ಬಸವೇಶ್ವರ ವೃತ್ತ ಸೇರಿ ನಗರದ ಎಲ್ಲ ಬೀದಿಗಳಲ್ಲಿ ಗುರುವಾರದಂದು ಸಾನಿಟೈಸರ್ ಸಿಂಪಡನೆ ಮಾಡಲಾಯಿತು.
ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಮಾತನಾಡಿ, ನಗರದಲ್ಲಿ ಕೊರೋನಾ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಜನರು ಮನೆಯಿಂದ ಹೊರಗಡೆ ಬಾರದೆ ಸರಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್ನ ಕುತುಬುದ್ದಿನ ಗೋಕಾಕ, ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಶಿವಾನಂದ ಹತ್ತಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಹರೀಶ ಬೂದಿಹಾಳ, ಬಾಬು ಮುಳಗುಂದ, ವಿಜಯ ಜತ್ತಿ, ಅಭಿಷೇಕ ದೇಸಾಯಿ, ಪ್ರಕಾಶ ಮುರಾರಿ, ವಿಶ್ವನಾಥ ಬಿಳ್ಳೂರ, ನಗರಸಭೆ ಪರಿಸರ ಅಭಿಯಂತರ ಗಜಾಕೋಶ ಇದ್ದರು.