RNI NO. KARKAN/2006/27779|Saturday, April 26, 2025
You are here: Home » breaking news » ಗೋಕಾಕ:‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ

ಗೋಕಾಕ:‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ 

‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ‘ಶರಣ ಸಾಹಿತ್ಯ ಅವಲೋಕನ’ ಕೃತಿ ಬಿಡುಗಡೆ ಸಮಾರಂಭ ನಾಳೆ

ಗೋಕಾಕ ಏ 16 : ಬೆಳುವಲ ಪ್ರಕಾಶನ, ಬಳೋಬಾಳ ಆಯೋಜಿತ ದಿ. ಶ್ರೀ ಭೀಮಪ್ಪ ಬಾಳಪ್ಪ ಹನಗಂಡಿ ಇವರ ಸ್ಮರಣಾರ್ಥ ‘ಬೆಳುವಲ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ. ಸುರೇಶ ಹನಗಂಡಿ ಅವರ ‘ಶರಣ ಸಾಹಿತ್ಯ ಅವಲೋಕನ’ ಕೃತಿಯ ಬಿಡುಗಡೆ ಸಮಾರಂಭವನ್ನು ಗುರುವಾರ ದಿನಾಂಕ: 17 ರಂದು ಸಾಯಂಕಾಲ 6 ಗಂಟೆಗೆ ಗೋಕಾಕದ ವಿದ್ಯಾನಗರದಲ್ಲಿನ ಶ್ರೀ ಬಸವ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶನದ ಪ್ರಕಾಶಕರಾದ ಡಾ. ಸುರೇಶ ಹನಗಂಡಿ ಇವರು ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾರಂಭವನ್ನು ಬಸಗೌಡ ಶಿವಗೌಡ ಪಾಟೀಲ, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ ಬೆಳಗಾವಿ ಇವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಾಳಪ್ಪ ಬಿ. ಬೆಳಕೂಡ, ಅಧ್ಯಕ್ಷರು, ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಕಲ್ಲೋಳಿ ಇವರು ವಹಿಸುವರು. ಪುಸ್ತಕವನ್ನು ಪ್ರೊ. ಚಂದ್ರಶೇಖರ ಅಕ್ಕಿ, ವಿಶ್ರಾಂತ ಪ್ರಾಧ್ಯಾಪಕರು, ಗೋಕಾಕ ಇವರು ಬಿಡುಗಡೆಗೊಳಿಸುವರು. ಪುಸ್ತಕ ಕುರಿತು ಡಾ. ವಾಯ್. ಎಮ್. ಯಾಕೊಳ್ಳಿ, ವಿಶ್ರಾಂತ ಪ್ರಾಚಾರ್ಯರು, ಸವದತ್ತಿ ಇವರು ಮಾತನಾಡುವರು. ಸಮಾರಂಭಕ್ಕೆ ಬಿ. ಡಿ. ಪಾಟೀಲ, ಖ್ಯಾತ ನ್ಯಾಯವಾದಿಗಳು, ಚಿಕ್ಕೋಡಿ ಹಾಗೂ ಮಹಾಂತೇಶ ತಾಂವಶಿ, ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು, ಗೋಕಾಕ ಇವರು ಗೌರವ ಉಪಸ್ಥಿತರಿರುವರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬೆಳುವಲ ಸಿರಿ ಪ್ರಶಸ್ತಿಯನ್ನು ನೀಡಲಾಗುವದು. ಸಾಹಿತ್ಯ ಕ್ಷೇತ್ರದಲ್ಲಿ ಮಹಾಲಿಂಗ ಮಂಗಿ, ಡಾ. ಎ. ವಾಯ್. ಪಂಗಣ್ಣವರ, ಡಾ. ಎಚ್. ಆಯ್. ತಿಮ್ಮಾಪೂರ, ಪ್ರೊ. ಸಂಗಮೇಶ ಗುಜಗೊಂಡ, ಪ್ರಕಾಶ ಕೋಟಿನತೋಟ ಇವರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಎಂ. ಪಿ. ಕೊಣ್ಣೂರು, ಶ್ರೀ ಭರಮಗೌಡ ಪಾಟೀಲ, ಲಕ್ಷ್ಮಣ ಚೌರಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಆರ್. ಎನ್. ಪಾಟೀಲ ಇವರಿಗೆ, ಸಂಗೀತ ಕ್ಷೇತ್ರದಲ್ಲಿ ಜಿ. ಕೆ. ಕಾಡೇಶಕುಮಾರ ಇವರಿಗೆ, ರಂಗಭೂಮಿಯಲ್ಲಿ ಈಶ್ವರಚಂದ್ರ ಬೆಟಗೇರಿ ಇವರಿಗೆ, ಪತ್ರಿಕೋದ್ಯಮದಲ್ಲಿ ಮಲ್ಲಪ್ಪ ಜೋತಾವರ ಇವರಿಗೆ, ಸಂಘಟನಾ ಕ್ಷೇತ್ರದಲ್ಲಿ ಶಕುಂತಲಾ ದಂಡಗಿ, ಭಾರತಿ ಮದಭಾವಿ, ರಜನಿ ಜೀರಗ್ಯಾಳ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಇವರಿಗೆ ಹಾಗೂ ಯೋಗದಲ್ಲಿ ಬಸಪ್ಪ ಬಡವಣ್ಣಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗುವುದೆಂದು ಡಾ. ಸುರೇಶ ಹನಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: