RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ಅಶರಫಅಲಿ ದೇಸಾಯಿ ಅವರಿಗೆ ರಾಜ್ಯಮಟ್ಟದ 2025ನೆ ಸಾಲಿನ “ಛಾಯಾ ಶ್ರೀ ಪ್ರಶಸ್ತಿ”ನೀಡಿ ಗೌರವ

ಗೋಕಾಕ:ಅಶರಫಅಲಿ ದೇಸಾಯಿ ಅವರಿಗೆ ರಾಜ್ಯಮಟ್ಟದ 2025ನೆ ಸಾಲಿನ “ಛಾಯಾ ಶ್ರೀ ಪ್ರಶಸ್ತಿ”ನೀಡಿ ಗೌರವ 

ಅಶರಫಅಲಿ ದೇಸಾಯಿ ಅವರಿಗೆ ರಾಜ್ಯಮಟ್ಟದ 2025ನೆ ಸಾಲಿನ “ಛಾಯಾ ಶ್ರೀ ಪ್ರಶಸ್ತಿ”ನೀಡಿ ಗೌರವ

ಗೋಕಾಕ ಏ 12 : ಕರ್ನಾಟಕ ಫೋಟೋಗ್ರಫಿ ಅಸೋಸಿಯೇಶನ್ ವತಿಯಿಂದ ನಡೆದ ಡಿಜಿ ಇಮೇಜ್ 2025 ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸಮಾರಂಭದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯ ಮಟ್ಟದ ಛಾಯಾ ಪ್ರಶಸ್ತಿಯನ್ನು ಈ ವರ್ಷ ನಗರದ ಹಿರಿಯ ಛಾಯಾಗ್ರಾಹಕ ಕಲಾ ಸ್ಟೂಡಿಯೋದ ಮಾಲೀಕರಾದ ಅಶರಫಅಲಿ ದೇಸಾಯಿ ಅವರಿಗೆ ನೀಡಿ ಗೌರವಿಸಿತು.

ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹೆಚ್.ಎಸ್.ನಾಗೇಶ್, ಪ್ರಧಾನ ಕಾರ್ಯದರ್ಶಿ ಎ.ಎಂ.ಮುರಳಿ, ಖಜಾಂಚಿ ಕೆ.ಆರ್.ಲವರಾಜು, ಗೋಕಾಕ ತಾಲೂಕಾ ಪೋಟೋಗ್ರಾಫಿ ಅಸೋಸಿಯೇಶನ್ ಪದಾಧಿಕಾರಿಗಳು ಸೇರಿದಂತೆ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.ಈ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡ ಆರ್ಶಫಅಲಿ ದೇಸಾಯಿ ಅವರಿಗೆ ಎಲ್ಲರಿಂದಲೂ ಅಭಿನಂದನೆಗಳು ಸಲ್ಲಿಕೆಯಾಗುತ್ತಿದೆ.

Related posts: