RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ

ಗೋಕಾಕ:ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ 

ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ

ಗೋಕಾಕ ಏ 4 : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂಪರ ಮುಖಂಡ ಸದಾಶಿವ ಗುದಗಗೋಳ ಹೇಳಿದರು.

ಶುಕ್ರವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರವಿವಾರದಂದು ಸಾಯಂಕಾಲ 4 ಘಂಟೆಗೆ ಶ್ರೀ ಕೊಳವಿ ಹನುಮಂತ ದೇವರ ಗುಡಿಯಿಂದ ಶೋಭಾಯಾತ್ರೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮುಕ್ತಾಯವಾಗುವುದು. ನಂತರ ರಾಮೋತ್ಸವದ ಕಾರ್ಯಕ್ರಮ ಜರುಗುವುದು. ಈ ಶೋಭಾಯಾತ್ರೆಯಲ್ಲಿ ಮಹಾಪುರುಷ ವೇಷಧಾರಿಗಳು, ವಿವಿಧ ವಾದ್ಯಮೇಳಗಳು ಪಾಲ್ಗೋಳ್ಳಲಿವೆ. ತಾಲೂಕಿನ ಮಠಾಧೀಶರು ಹಾಗೂ ಹಿಂದೂಪರ ಸಂಘಟನೆಗಳು ಈ ಶೋಭಾಯಾತ್ರೆಯಲ್ಲಿ ಭಾಗವಹಿಸುವರು. ಜಾತಿ,ಮತ,ಪಂಥ ಬೇಧವಿಲ್ಲದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗುವಂತೆ ಕೋರಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರುಗಳಾದ ನಾರಾಯಣ ಮಠಾಧಿಕಾರಿ, ಲಕ್ಷ್ಮಣ ಮೀಶಾಳೆ, ಪುರುಷೋತ್ತಮ ಒಡೆಯರ, ಆನಂದ ಫಾತಾಗೀರಿ ಉಪಸ್ಥಿತರಿದ್ದರು.

Related posts: