RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ:ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ : ಅಶೋಕ್

ಗೋಕಾಕ:ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ : ಅಶೋಕ್ 

ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ : ಅಶೋಕ್

ಗೋಕಾಕ 19 : ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗಳು ನಡೆಯಲು ಖೊಟ್ಟಿ ಮತದಾನವನ್ನು ನಿಗ್ರಹಿಸುವದು ಅತ್ಯಂತ ಅವಶ್ಯಕವಾಗಿದ್ದು, ಅದಕ್ಕೆ ಪೂರಕವಾಗಿಯೇ ಕೇಂದ್ರ ಚುನಾವವಣಾ ಆಯೋಗ ಮತ್ತು ಕೇಂದ್ರ ಸರಕಾರದ ಗೃಹ ಖಾತೆಗಳು ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ ಹಾಗೂ ಇನ್ನಿತರ ಸರಕಾರದ ಸಂಸ್ಥೆಗಳೊಂದಿಗೆ ನಡೆದ ಕೇಂದ್ರ ಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ಇಂದು ಅಧಿಕೃತ ನಿರ್ಣಯ ತೆಗೆದುಕೊಂಡು ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ(ಲಿಂಕ್) ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ಈ ಕ್ರಮವನ್ನು ಸ್ವಾಗತಿಸಿದ ಅವರು ಇದಕ್ಕೆ ಪೂರಕವಾಗಿಯೇ ತಾವು ಗೋಕಾಕ ತಾಲೂಕ ಮತದಾರರ ವೇದಿಕೆಯ ನೇತೃತ್ವದಲ್ಲಿ ಕಳೆದ 13 ವರ್ಷಗಳಿಂದ ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡ ಲಿಂಕ್ ಮಾಡಲು ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿ ಮನವಿಗಳನ್ನು ಸಲ್ಲಿಸುವುದರ ಜೊತೆಗೆ ಧರಣಿ ಸತ್ಯಾಗ್ರಹಗಳ ಮೂಲಕ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿ ಗಮನಸೆಳೆಯುತ್ತ ಬಂದಿರುವದಾಗಿ ತಿಳಿಸಿರುವ ಅವರು ಈ ಕುರಿತು ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಹಾಗೂ ಅದಕ್ಕೆ ಪೂರಕವಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದ ಸರ್ವೋಚ್ಛ ನ್ಯಾಯಾಲಯಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗೆ ಪೂರಕವಾಗಿ ಖೊಟ್ಟಿ ಮತದಾನವನ್ನು ನಿಗ್ರಹಿಸುವದು ಎಷ್ಟು ಅವಶ್ಯಕವಿದೆಯೋ ಅಷ್ಟೇ ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲಕ್ಕೆ ಕಡಿವಾಣ ಹಾಕುವದು ಅಷ್ಟೇ ಅವಶ್ಯಕತೆಯಾಗಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಪೂರಕವಾದ ಹೋರಾಟಕ್ಕೆ ಅನಿಯಾಗುವುದಾಗಿ ತಿಳಿಸಿದ್ದಾರೆ.

Related posts: