RNI NO. KARKAN/2006/27779|Saturday, February 14, 2026
You are here: Home » breaking news » ರಾಮದುರ್ಗ:ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ

ರಾಮದುರ್ಗ:ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ 

ಅಕ್ರಮ ಮರಳು ದಂಧೆ ತಡೆಯಲು ತೆರಳಿದ್ದ ತಹಸೀಲ್ದಾರ್ ಮೇಲೆ ಧಾಳಿ : ರಾಮದುರ್ಗ ತಾಲೂಕಿನಲ್ಲಿ ಘಟನೆ

ರಾಮದುರ್ಗ ಜು 18: ಬಹುದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿದ ಎನ್ನಲಾದ ಅಕ್ರಮ ಮರಳು ದಂಧೆಯನ್ನು ತಡೆಯಲು ತೆರಳಿದ್ದ ತಹಶೀಲ್ದಾರ್ ಮೇಲೆ ಅಕ್ರಮ ಮರಳು ದಂಧೆಕೋರರು ಧಾಳಿ ನಡೆಸಿದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ .
ತಾಲೂಕಿನ ಹುಲಿಗೊಪ್ಪ ಗ್ರಾಮದ ಹೊರವಲಯದ ಹಳ್ಳದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ದಾಳಿಗೆಂದು ತೆರಳಿದ್ದ ರಾಮದುರ್ಗ ತಹಸೀಲ್ದಾರ್‌ ಆರ್.ವಿ.ಕತ್ತಿ ಅವರ ವಾಹನಕ್ಕೆ ಮರಳು ದಂಧೆಕೋರರು ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. 

ಡಿಕ್ಕಿ ಹೊಡೆತದಿಂದ ತಹಸೀಲ್ದಾರರ್‌ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಈ ಕುರಿತು ರಾಮದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ

Related posts: