ಗೋಕಾಕ:ಯುವಪೀಳಿಗೆ ಯಾವಾಗಲೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು : ಖೇಲ್ ರತ್ನ ದೀಪಾ ಕರ್ಮಾಕರ

ಯುವಪೀಳಿಗೆ ಯಾವಾಗಲೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು : ಖೇಲ್ ರತ್ನ ದೀಪಾ ಕರ್ಮಾಕರ
ಗೋಕಾಕ ಫೆ 3 : ಯುವಪೀಳಿಗೆ ಯಾವಾಗಲೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದೆ ಧೈರ್ಯದಿಂದ ಮುಂದೆಸಾಗಿದರೆ ಸಾಧಕರಾಗಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅಂತರಾಷ್ಟ್ರೀಯ ಓಲಂಪಕ್ಸ ಜಿಮ್ನಾಸ್ಟಿಕ್ ದೀಪಾ ಕರ್ಮಾಕರ ಹೇಳಿದರು
ಸೋಮವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿ.ಸಿ.ಎ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಪಾಲಕರು ಹೆಚ್ಚಿನ ಮಹತ್ವ ನೀಡಿ ವಿಧ್ಯಾಭ್ಯಾಸ ಮಾಡಿಸಬೇಕು. ನಮ್ಮಲ್ಲಿ ಏನಿಲ್ಲ ಅದರ ಬಗ್ಗೆ ತೆಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಸಾಧಕರಾಗಬೇಕು. ದೇಶಕ್ಕಾಗಿ ಇನ್ನಷ್ಟು ಕಾಲ ಆಟವಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ಆರೋಗ್ಯ ಸ್ವಂದಿಸದ ಕಾರಣ ನಾನು 31ನೇ ವಯಸ್ಸಿನಲ್ಲೇ ಕ್ರೀಡಾ ಜೀವನಕ್ಕೆ ವಿಧಾಯ ಹೇಳಬೇಕಾಯಿತು.ಈಗ ನಾನು ನನ್ನಲ್ಲಿ ಅಡುಗಿರುವ ಅನುಭವಗಳನ್ನು ಇತರ ಕ್ರೀಡಾಪಟುಗಳಿಗೆ ಕಲಿಸುವ ಕಾರ್ಯದಲ್ಲಿ ನಿರತರಾಗಿದ್ದೇನೆ. ನಾನು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದು, ನಮ್ಮ ತಂದೆ ಒಬ್ಬ ಕ್ರೀಡಾಪಟು ಅವರ ಮಾರ್ಗದರ್ಶನ ದಲ್ಲಿ ನಾನು ಒಬ್ಬ ಸಾಧಕಿಯಾಗಿದ್ದೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯ ಶ್ರೀಮತಿ ಅರ್ಪಾನಾ ಕುಲಕರ್ಣಿ ಉಪಸ್ಥಿತರಿದ್ದರು.