ಗೋಕಾಕ:ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಹಕಾರ ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ : ಕವಟಗಿಮಠ
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಹಕಾರ ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ : ಕವಟಗಿಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 7 :
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಹಕಾರ ನೀಡುವಲ್ಲಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ ಹೇಳಿದರು.
ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಫತ್ತಿನ ಸಂಘಗಳ ಮಹಾಮಂಡಳ ಮತ್ತು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ,ಮುಖ್ಯ ಕಾರ್ಯನಿರ್ವಾಹನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾತ್ರ ಕೆಲ ಸಹಕಾರಿ ಸಂಘಗಳ ಹುಟ್ಟಿವೆ ಸಹಕಾರಿ ಸಂಘಗಳನ್ನು ತಮ್ಮ ಸ್ವಾರ್ಥಕ್ಕಾಗಿ ನಿರ್ಮಿಸದೆ ಬಡವರ ಒಳಿತಿಗಾಗಿ ಸಹಕಾರ ಸಂಘಗಳನ್ನು ಕಟ್ಟಿದರೆ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ. ಆ ದಿಸೆಯಲ್ಲಿ ಎಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿಯವರು ಮುಂದಾಗಬೇಕು.
ಇ- ಸ್ಟಾಪಿಂಗ ಸೇವೆ ಸೇರಿದಂತೆ ಇನ್ನೀತರ ಸರಕಾರಿ ಸೌಲಭ್ಯಗಳನ್ನು ನಾವು ಸಂಸ್ಥೆಯ ಮುಖಾಂತರ ವ್ಯವಹಾರ ಮಾಡಿದರೆ ಸಹಕಾರಿ ಸಂಸ್ಥೆ ಮುಂದೆ ಬರಲು ಸಾಧ್ಯ
ಸಾರ್ವಜನಿಕರು ಸಹಕಾರಿ ಸಂಸ್ಥೆಗಳಲ್ಲಿ ಠೇವಣಿ ಮಾಡುವಾಗ ಸಂಸ್ಥೆಯ 3 ವರ್ಷದ ಆಡಿಟ್ ವರದಿ ನೋಡಬೇಕು . ಇಲ್ಲದಿದ್ದರೆ ಠೇವಣಿ ಹಣವನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಬಹಳ ಕಾಳಜಿಯಿಂದ ವ್ಯವಹಾರ ಮಾಡಬೇಕು ಎಂದ ಅವರು ಶೈಕ್ಷಣಿಕ ಕಾರ್ಯಗಾರದಲ್ಲಿ ಮೂಡಿ ಬಂದ ಎಲ್ಲ ಸಕಾರಾತ್ಮಕ ವಿಚಾರಗಳನ್ನು ಸಹಕಾರಿ ಸಂಸ್ಥೆಗಳು ಅನುಷ್ಠಾನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಬಿ.ಡಿ.ಪಾಟೀಲ ವಹಿಸಿದ್ದರು. ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಸಬ್ ರಿಜಿಸ್ಟ್ರಾರ್ ವಿಷ್ಣು ತೀರ್ಥ ಅವರು ಸಾಲಭದ್ರತೆಯಲ್ಲಿ ಆಸ್ತಿ ನೋಂದಣಿ ಮತ್ತು ಋಣಭಾರ ಪ್ರಮಾಣ ಪತ್ರ ವಿಷಯ ಕುರಿತು ಮತ್ತು ಸೈಡರ ಕ್ರೈಂ ಇನ್ಸಪೆಕ್ಟರ್ ಸಂಗಮೇಶ ಹೊಸಮನಿ ಹಣಕಾಸು ಸಂಸ್ಥೆಗಳಲ್ಲಿ ಸೈಬರ್ ಕ್ರೈಂ ಹಾಗೂ ಸಹಕಾರ ಸಂಘಗಳ ನಿಬಂಧಕ ಎಸ್.ಜಿ ಜೋಷಿ ಅವರು ಸಹಕಾರ ಸಂಘಗಳ ಇತ್ತೀಚಿನ ತಿದ್ದುಪಡಿಗಳು ಹಾಗೂ ಪತ್ತಿನ ಸಹಕಾರ ಸಂಘಗಳ ಸಾಲ ವಸೂಲಾತಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಡಾ.ಸಂಜಯ ಹೊಸಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಮಹಾಮಂಡಳಿ ನಿರ್ದೇಶಕ ಉಮೇಶ ಬಾಳಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಶಾಹಿನ್ ಅಖ್ತರ್ , ಹೆಚ್. ಡಿ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.